ಮುಲ್ಕಿ: ಕಿನ್ನಿಗೋಳಿ ಜೆಬಿ ಫ್ರೆಂಡ್ಸ್ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಕಿನ್ನಿಗೋಳಿಯ ಪೊಂಪೈ ಕಾಲೇಜಿನಲ್ಲಿ, ಎಂಕಾಂ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರಾಗಿ ಸೇವೆ ಸಲ್ಲಿಸುತ್ತಿರುವ ಸಿಲ್ವಿಯಾ ಪಾಯ್ಸ್ ಅವರನ್ನು ಗುರುತಿಸಿ ಗೌರವಿಸಲಾಯಿತು.
ಈ ಸಂದರ್ಭ ಜಿಬಿ ಫ್ರೆಂಡ್ಸ್ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಪುನರೂರು ಮಾತನಾಡಿ, ಎಳವೆಯಲ್ಲಿ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಲು ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಅವರನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಈ ಸಂದರ್ಭ ಜೆಬಿ ಫ್ರೆಂಡ್ಸ್ ಗೌರವಾಧ್ಯಕ್ಷ ವಿನ್ಸೆಂಟ್ ಡಿಕೋಸ್ತ, ಕಾರ್ಯದರ್ಶಿ ನಿಶಾನ್ ಕ್ವಾಡ್ರಸ್, ಸದಸ್ಯರಾದ ರೋನ್ಸನ್, ಸೈಮನ್ ಕ್ವಾಟರ್ಸ್, ರೋಲ್ಪೀ ಡಿಸೋಜ, ಜೋಯಲ್ ಉಪಸ್ಥಿತರಿದ್ದರು.
Kshetra Samachara
05/09/2021 07:36 pm