ಮುಲ್ಕಿ: ಶೈಕ್ಷಣಿಕ ಸಹಕಾರ ಪಡೆದು ಸಾಧಕ ವಿದ್ಯಾರ್ಥಿಯಾಗಿ ಬೆಳೆದು ವೃಕ್ತಿ ಜೀವನದಲ್ಲಿ ಸಾರ್ಥಕತೆಯನ್ನು ಗಳಿಸುವುದರ ಜೊತೆಗೆ ಗ್ರಾಮದ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಕಾರ ನೀಡುವ ಕಾರ್ಯ ಅಭಿನಂದನೀಯ ಎಂದು ಮೂಲ್ಕಿ ನ ಪಂ ಸದಸ್ಯ ಯೋಗೀಶ್ ಕೋಟ್ಯಾನ್ ಹೇಳಿದರು.
ಮೂಲ್ಕಿ ಚಿತ್ರಾಪು ಶ್ರೀ ವಿಠೋಭ ಬಾಲಲೀಲಾ ಭಜನಾ ಮಂದಿರದ ವತಿಯಿಂದ ಶೈಕ್ಷಣಿಕ ಸಹಕಾರ ಯೋಜನೆಯ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಹಕಾರ ನಿಧಿಗೆ ಧನ ಸಹಾಯ ನೀಡಿದ ಪ್ರತಿಕ್ಷಾ ಡಿ ಸುವರ್ಣ ರವರನ್ನು ಗೌರವಿಸಿ ಮಾತನಾಡಿದರು. ಮಂದಿರ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉದ್ಯಮಿ ರವಿ ಕೆ .ಶೆಟ್ಟಿ, ಮಹಾಬಲ ಸನಿಲ್, ರಾಧಿಕಾ ಯಾದವ ಕೋಟ್ಯಾನ್ ಮಂದಿರದ ಉಪಾಧ್ಯಕ್ಷ ಮಂಜುನಾಥ ಸನಿಲ್, ಗೌರವಾಧ್ಯಕ್ಷರುಗಳಾದ ರಮೇಶ್ ಅಮೀನ್, ಬಾಲಚಂದ್ರ ಸನಿಲ್, ಕಾರ್ಯದರ್ಶಿ ರಿತೇಶ್ ಪೂಜಾರಿ, ಕೋಶಾಧಿಕಾರಿ ಪ್ರಜ್ವಲ್ ಕೋಟ್ಯಾನ್ ,ಭಜನಾ ಸಂಚಾಲಕ ಅಶೋಕ ಅಮೀನ್ ಮತ್ತು ಮಹಿಳಾ ಮಂಡಲದ ಅಧ್ಯಕ್ಷರಾದ ಕುಸುಮ ಆರ್ ಕೋಟ್ಯಾನ್ ಮತ್ತಿತರರಿದ್ದರು.
Kshetra Samachara
06/08/2021 03:04 pm