ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸ್ವಾತಂತ್ರ್ಯ ಅಮೃತೋತ್ಸವ; ಕರಾವಳಿ ಕಾಲೇಜಿನಿಂದ 75 ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪ್ರವೇಶ

ಮಂಗಳೂರು: ದೇಶದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕರಾವಳಿ ಕಾಲೇಜುಗಳ ಸಮೂಹ 75 ಸಾಧಕರಿಗೆ ಸನ್ಮಾನ ಹಾಗೂ 75 ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪ್ರವೇಶಾವಕಾಶವನ್ನು ಕಲ್ಪಿಸಲಾಗುತ್ತದೆ ಎಂದು ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿಯ ಸ್ಥಾಪಕಾಧ್ಯಕ್ಷ ಎಸ್.ಗಣೇಶ್ ರಾವ್ ತಿಳಿಸಿದರು.

ನಗರದ ನೀರುಮಾರ್ಗದಲ್ಲಿರುವ ಕರಾವಳಿ ಕಾಲೇಜಿನಲ್ಲಿ ಮಾತನಾಡಿದ ಅವರು, 75 ವಿದ್ಯಾರ್ಥಿಗಳ ರಿಯಾಯಿತಿ ದರದ ಪ್ರವೇಶಾವಕಾಶವನ್ನು ಇಂಜಿನಿಯರಿಂಗ್, ಫಿಸಿಯೋಥೆರಪಿ, ಹೊಟೇಲ್ ಮ್ಯಾನೇಜ್ಮೆಂಟ್, ಇಂಟೀರಿಯರ್ ಡಿಸೈನ್, ಫ್ಯಾಷನ್ ಡಿಸೈನ್ ಇತ್ಯಾದಿ ಕೋರ್ಸ್ ಗಳಿಗೆ ಕಲ್ಪಿಸಲಾಗಿದೆ. ‌ಸಿಇಟಿಯಲ್ಲಿ‌ 2 ಸಾವಿರ ಒಳಗಿನ rank ಗಳಿಸಿರುವವರಿಗೆ ಶೇ.100ರಷ್ಟು ರಿಯಾಯಿತಿ, 2 - 5 ಸಾವಿರದ ಒಳಗಿನ rank ಬಂದವರಿಗೆ ಶೇ. 75 ರಿಯಾಯಿತಿ, 5-10 ಸಾವಿರ rank ಬಂದವರಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತದೆ. ಮೆರಿಟ್ ಆಧಾರದಲ್ಲಿ ರಿಯಾಯಿತಿ ನೀಡಲಾಗುತ್ತದೆ. ಆಸಕ್ತರು scholarshipkaravaligrooup@gmail.comಗೆ ಅರ್ಜಿ ಸಲ್ಲಿಸಬಹುದು ಎಂದರು.

ಅದೇ ರೀತಿ ಶಿಕ್ಷಕರ ಸಹಿತ 75 ಸಾಧಕರಿಗೆ ಸನ್ಮಾನ ನಡೆಯಲಿದೆ. ಪ್ರಾಥಮಿಕ, ಪ್ರೌಢಶಾಲಾ, ಪಿಯುಸಿ, ಪದವಿ, ಪಿಜಿ, ವೈದ್ಯಕೀಯ, ಇಂಜಿನಿಯರಿಂಗ್, ಆಯುರ್ವೇದಿಕ್, ನರ್ಸಿಂಗ್, ಫಾರ್ಮಸಿ, ಫಿಸಿಯೊಥೆರಪಿ ಸಹಿತ ವೃತ್ತಿಪರ ಕೋರ್ಸ್ ಗಳ ಪ್ರಾಧ್ಯಾಪಕರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ ಎಂದು ಗಣೇಶ್ ರಾವ್ ಹೇಳಿದರು.

Edited By : Somashekar
Kshetra Samachara

Kshetra Samachara

12/08/2022 05:54 pm

Cinque Terre

5.21 K

Cinque Terre

0

ಸಂಬಂಧಿತ ಸುದ್ದಿ