ಪುತ್ತೂರು: ರಾಜ್ಯಾದ್ಯಂತ ಇಂದಿನಿಂದ 1ನೇ ತರಗತಿಯಿಂದ ಶಾಲೆ ಆರಂಭಗೊಂಡಿದೆ. ಅದರಂತೆ ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಪ್ರತಿ ಶಾಲೆಯಲ್ಲಿ ಪೋಷಕರೂ ಮಕ್ಕಳೊಂದಿಗೆ ಆಗಮಿಸಿ ಮಕ್ಕಳಿಗೆ ಧೈರ್ಯ ತುಂಬಿದರು.
ಈ ಸಂದರ್ಭ ಚಿಣ್ಣರನ್ನು ಆರತಿ ಬೆಳಗಿ, ಚಾಕೋಲೆಟ್, ಪೆನ್ಸಿಲ್ ನೀಡಿ ಶಿಕ್ಷಕರು ಬರಮಾಡಿ ಕೊಂಡರು. ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರಕಾರ ಸೂಚಿಸಿದ್ದು, ಎಲ್ಲ ಶಿಕ್ಷಕರೂ ಎರಡು ಡೋಸ್ ಲಸಿಕೆ ಹಾಕಿರುವುದಮ್ನು ದೃಢಪಡಿಸಿ ಪಾಠಕ್ಕೆ ಅವಕಾಶ ನೀಡಲಾಗಿದೆ.
Kshetra Samachara
25/10/2021 02:59 pm