ಉಡುಪಿ: ಒಂದೂ ಮುಕ್ಕಾಲು ವರ್ಷಗಳ ಬಳಿಕ ಚಿಣ್ಣರಿಗೆ ಇಂದು ಶಾಲಾರಂಭಗೊಂಡಿದೆ.ಒಂದರಿಂದ ಐದನೇ ತರಗತಿ ಮಕ್ಕಳು ಇವತ್ತು ಬಣ್ಣಬಣ್ಣದ ಯೂನಿಫಾರ್ಮ್ ನೊಂದಿಗೆ ಶಾಲೆಗೆ ಹೋಗುವ ದೃಶ್ಯ ಮುದ ನೀಡುವಂತಿತ್ತು.ಶಾಲೆಯಲ್ಲಿ ಮೊದಲ ದಿನ ಹ್ಯಾಂಡ್ ಸ್ಯಾನಿಟೈಸರ್ ,ಟೆಂಪರೇಚರ್ ಚೆಕಪ್ ವ್ಯವಸ್ಥೆ ಮಾಡಲಾಗಿತ್ತು.ಪುಟ್ಟ ಮಕ್ಕಳು ಬೆರಗುಗಣ್ಣುಗಳಿಂದ ಶಾಲೆಯೊಳಗೆ ತೆರಳಿ ತರಗತಿಯೊಳಗೆ ಕುಳಿತರು.ಮೊದಲ ದಿನವಾದ ಇವತ್ತು ಬಹುತೇಕ ಮಕ್ಕಳು ತಮ್ಮ ತಮ್ಮ ಪೋಷಕರ ಜೊತೆಗೆ ಶಾಲೆಗೆ ಬರುವ ದೃಶ್ಯ ಉಡುಪಿಯೆಲ್ಲೆಡೆ ಕಂಡು ಬಂತು.
ಒಂದು ವಾರ ಮಕ್ಕಳಿಗೆ ಅರ್ಧ ದಿನ ಮಾತ್ರ ಶಾಲೆ ಇರಲಿದೆ.ಮುಂದಿನ ಸೋಮವಾರದಿಂದ ಫುಲ್ ಡೇ ಕ್ಲಾಸ್.ಶಾಲಾರಂಭ ಹಿನ್ನೆಲೆಯಲ್ಲಿ ಕ್ಯಾಬ್, ಆಟೋಗಳೂ ಪೂರ್ಣಪ್ರಮಾಣದಲ್ಲಿ ಇಂದು ಕಂಡುಬಂದವು.ಹಲವು ಶಾಲೆಗಳ್ಳಿ ಮಕ್ಕಳನ್ನು ಹೂವು ನೀಡಿ ಸ್ವಾಗತಿಸುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಪುಟ್ಟ ಪುಟ್ಟ ಹೆಜ್ಜೆಯಿಡುತ್ತ ಶಾಲೆಕಡೆ ಬರುತ್ತಿರುವ ಚಿಣ್ಣರಿಗೆ ಶುಭ ಹಾರೈಸೋಣ...
Kshetra Samachara
25/10/2021 12:01 pm