ಮುಲ್ಕಿ: ಮುಲ್ಕಿ ರಾಮಕೃಷ್ಣ ಪೂಂಜ ಸ್ಮಾರಕ ದತ್ತಿನಿಧಿ ಸ್ಕಾಲರ್ ಶಿಪ್, ಡಿ. ಆರ್. ಕೃಷ್ಣ ರಾವ್ ಮತ್ತು ಸೀತಮ್ಮ ಸ್ಮಾರಕ ಸ್ಕಾಲರ್ ಶಿಪ್, ಕೃಷ್ಣ ಪೂಜಾರಿ ಸ್ಮಾರಕ ಸ್ಕಾಲರ್ ಶಿಪ್, ಗೀತಾ ವೆಂಕಟರಾಮನ್ ಸ್ಕಾಲರ್-ಶಿಪ್, ಶಾರದಮ್ಮ ಲಕ್ಷ್ಮಿನಾರಾಯಣಪ್ಪಯ್ಯ ಸ್ಮಾರಕ ಸ್ಕಾಲರ್ ಶಿಪ್ ಗಳನ್ನು ಮುಲ್ಕಿ ರಾಮಕೃಷ್ಣ ಪೂಂಜ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿತರಿಸಲಾಯಿತು.
ಈ ಸಂದರ್ಭಉದ್ಯಮಿ ಆದಿತ್ಯ ಪೂಂಜ ಮಾತನಾಡಿ, ಕಠಿಣ ಪರಿಶ್ರಮದೊಂದಿಗೆ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಸಾಧನೆ ಮಾಡಿ ಭವಿಷ್ಯ ರೂಪಿಸಿಕೊಳ್ಳಿ. ಸರಕಾರದ ಸವಲತ್ತು ಪಡೆದುಕೊಡು ಸ್ವಂತ ಉದ್ದಿಮೆ ಮಾಡಿ ಸ್ವಾವಲಂಬಿಗಳಾಗಿ ಎಂದರು.
75 ಸಾವಿರ ರೂ. ಮೊತ್ತದ ವಿದ್ಯಾರ್ಥಿವೇತನ ವಿತರಿಸಲಾಯಿತು. ಅಧ್ಯಕ್ಷತೆಯನ್ನು ಸಂಸ್ಥೆ ಪ್ರಾಚಾರ್ಯ ಹರಿ ಎಚ್. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಖ್ಯ ಮುಲ್ಕಿ ರೋಟರಿ ಅಧ್ಯಕ್ಷರಾದ ಅಶೋಕ್ ಶೆಟ್ಟಿ, ಕಾರ್ಯದರ್ಶಿ ವೈ.ಎನ್. ಸಾಲ್ಯಾನ್, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಕಾರ್ಕಳದ ಹಿರಿಯ ಲೆಕ್ಕ ಪರಿಶೋಧಕರಾದ ಯೋಗೀಶ್ ಪೂಜಾರಿ, ಉದ್ಯೋಗಾಧಿಕಾರಿ ರಘುರಾಮ ರಾವ್ , ಕಚೇರಿ ಅಧೀಕ್ಷಕರಾದ ಹರಿಶ್ಚಂದ್ರ ಎ. ತರಬೇತಿ ಅಧಿಕಾರಿ ಲಕ್ಷ್ಮೀಕಾಂತ್ ಉಪಸ್ಥಿತರಿದ್ದರು. ಸುರೇಶ್ ಎಸ್. ಕಾರ್ಯಕ್ರಮ ನಿರ್ವಹಿಸಿದರು. ಹರಿಶ್ಚಂದ್ರ ಎ. ವಂದಿಸಿದರು.
Kshetra Samachara
30/10/2020 04:27 pm