ಮುಲ್ಕಿ : ಕೇಂದ್ರ ಶಾಫಿ ಜುಮಾ ಮಸೀದಿ ಸಮಿತಿಯ ಆಶ್ರಯದಲ್ಲಿ ಮಸ್ಜಿದುನ್ನೂರು ಕಾರ್ನಾಡ್ ವಠಾರದಲ್ಲಿ ಇಲಾಲ್ ಮದೀನಾ ಮಿಲಾದ್ ಫೆಸ್ಟ್ ಉದ್ಘಾಟನಾ ಕಾರ್ಯಕ್ರಮವು ಮರ್ಹೂಂ ಕೋಟ ಅಬ್ದುಲ್ ಖಾದರ್ ಮುಸ್ಲಿಯಾರ್ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಶಾಫಿ ಜುಮ್ಮಾ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷರಾದ ಬಿ.ಎಂ. ಲಿಯಾಕತ್ ಅಲಿಯವರು ವಹಿಸಿದ್ದರು.
ಉದ್ಘಾಟನೆಯನ್ನು ಸ್ಥಳೀಯ ಖತೀಬರಾದ ಅಲ್ ಹಾಜಿ ಇಸ್ಮಾಯಿಲ್ ದಾರಿಮಿ ನೆರೆವೇರಿಸಿದರು. ಮುಲ್ಕಿ ಕೇಂದ್ರ ಜುಮ್ಮಾ ಮಸೀದಿ ಖತೀಬ್ ಹಾಗೂ ಮುದರ್ರಿಸರಾದ ಶಾಫಿ ಫೈಝಿ ಅಲ್ ಇರ್ಫಾನಿ ಹುಬ್ಬುರಸೂಲ್ ಬಗ್ಗೆ ಪ್ರಭಾಷಣೆಯನ್ನು ನಡೆಸಿದರು. ಮುಖ್ಯ ಅತಿಥಿಯಾಗಿ ಶಾಫಿ ಜುಮ್ಮಾ ಮಸೀದಿ ಸಮಿತಿಯ ಮಾಜಿ ಅಧ್ಯಕ್ಷ ಇಕ್ಬಾಲ್ ಮುಲ್ಕಿ ಹಾಗೂ ಅಧ್ಯಕ್ಷ ಬಿ.ಎಂ. ಲಿಯಾಕತ್ ಆಲಿ ಮಾತನಾಡಿದರು.
ವೇದಿಕೆಯಲ್ಲಿ ಅಬ್ದುಲ್ಲಾ ದಾರಿಮಿ, ಫಾರೂಕ್ ಹಾಜಿ, ದಾವೂದ್ ದಾರಿಮಿ, ಸಿದ್ದೀಕ್ ಮುಸ್ಲಿಯಾರ್, ಅಶ್ರಫ್ ಅಝ್ಹರಿ, ಪುತ್ತುಬಾವ, ಹಸೈನ್ ಎಂ.ಕೆ., ಇಬ್ರಾಹಿಂ, ಅಕ್ಬರ್, ಅನ್ಸಾರ್ ಕಲ್ಪಂಡೆ, ಹಸನ್ ಬಾವ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಅಬ್ದುಲ್ ರಝಾಕ್ ಮದನಿ ಸ್ವಾಗತಿಸಿದರು. ಮತ್ತು ತ್ವಯ್ಯಿಬ್ ಫೈಝಿ ಧನ್ಯವಾದ ಅರ್ಪಿಸಿದರು.
Kshetra Samachara
06/10/2022 08:26 pm