ಕಾಪು : ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅದಮಾರು ಓಂ ಪ್ರೇಂಡ್ಸ್ ಸಂಸ್ಥೆಯ ಐದನೇ ವರ್ಷದ ನವರಾತ್ರಿ ಸಂದರ್ಭ ಹುಲಿವೇಷ ಧರಿಸಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ತಿರುಗಾಟ ಆರಂಭಿಸಿದೆ.
ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಸಂಸ್ಥೆಯ ವಾರ್ಷಿಕೋತ್ಸವ ನಡೆಸುವ ಅದೆಷ್ಟೋ ಸಂಸ್ಥೆಗಳಿಗೆ ಅಪವಾದವೋ ಎಂಬಂತೆ ಅದಮಾರಿನ ಓಂ ಪ್ರೇಂಡ್ಸ್ ಕಳೆದ ಇಪ್ಪತ್ತು ವರ್ಷಗಳಿಂದ ಸಮಾಜಮುಖಿ ಕಾರ್ಯ ಮುಂದುವರಿಸಿ ಕಳೆದ ಐದು ವರ್ಷಗಳಿಂದ ಸಂಸ್ಥೆಯ ಸದಸ್ಯರೇ ಸೇರಿ ಹುಲಿವೇಷ ಹಾಕಿ ತಿರುಗಾಟ ನಡೆಸಿ ಬರುವ ಹಣದಿಂದ ವೇಷ ಭೂಷಣಗಳ ಖರ್ಚು ಹೊರತು ಪಡಿಸಿ ಇದರಿಂದ ಉಳಿದ ಹಣವನ್ನು ಸಮಾಜದ ಜನರ ಕಷ್ಟ ಕಾರ್ಪಣ್ಯಗಳಿಗೆ ಊಪಯೋಗಿಸುವ ಮೂಲಕ ತಮ್ಮ ಸಂಸ್ಥೆಯ ಇರಾದೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.
ನೂರಾರು ವಿವಿಧ ಬಗೆಯ ಸಾಧನೆಗಳನ್ನು ಮಾಡಿದ ಸದಸ್ಯರನ್ನು ಹೊಂದಿರುವ ಈ ಸಂಸ್ಥೆ ವಿದ್ಯಾರ್ಥಿ ವೇತನ, ಅನಾರೋಗ್ಯ ಪೀಡಿತರಿಗೆ ನೆರವು ಸಹಿತ ಕೊರೋನಾ ಸಂದರ್ಭ ಆಹಾರ ಕಿಟ್ಟ್ ವಿತರಿಸುವ ಮೂಲಕ ಸಂಸ್ಥೆಯ ಬಗ್ಗೆ ಜನರ ವಿಶ್ವಾಸಗಳಿಸಿಕೊಂಡ ಸಂಸ್ಥೆ ಇದಾಗಿದೆ.
PublicNext
03/10/2022 04:13 pm