ಮುಲ್ಕಿ: ಹಿಂದೂ ಯುವ ಸೇನೆ ಮತ್ತು ಮಹಿಳಾ ಮಂಡಳಿ ಮುಲ್ಕಿ ಘಟಕದ ಆಶ್ರಯದಲ್ಲಿ ಮುಲ್ಕಿ ಪುನರೂರು ಕಾಂಪ್ಲೆಕ್ಸ್ ಬಳಿಯ ಶಿವಾಜಿ ಮಂಟಪದಲ್ಲಿ 24ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಾತೆಯ ಪ್ರತಿಷ್ಠೆ ಅರ್ಚಕ ಪ್ರಶಾಂತ್ ಭಟ್ ಪರೋಹಿತ್ಯದಲ್ಲಿ
ನಡೆಯಿತು.
ಕಾರ್ಯಕ್ರಮವನ್ನು ಉದ್ಯಮಿ ಪ್ರಕಾಶ್ ಶೆಣೈ ಶ್ರೀನಿಧಿ ಉದ್ಘಾಟಿಸಿದರು. ಮುಲ್ಕಿ ಪೊಲೀಸ್ ವೃತ್ತ ನಿರೀಕ್ಷಕರಾದ ಕುಸುಮಾಧರ್ ಧ್ವಜಾರೋಹಣಗೈದರು. ಈ ಸಂದರ್ಭ ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವ ಪ್ರಸಾದ್ ಪುನರೂರು. ಹಿಂದೂ ಯುವ ಸೇನೆಯ ಮೂಲ್ಕಿ ಘಟಕದ ಅಧ್ಯಕ್ಷ ಸುನಿಲ್ ಕುಮಾರ್ ಕಿಲ್ಪಾಡಿ, ಉಪಾಧ್ಯಕ್ಷ ಶಂಕರ ಪಡಂಗ, ಪ್ರಧಾನ ಕಾರ್ಯದರ್ಶಿ ಸುಧಾಕರ ಆಚಾರ್ಯ,ಕೋಶಧಿಕಾರಿ ರಂಗ ಕೋಟ್ಯಾನ್,ಮಹಿಳಾ ಮಂಡಳಿ ಅಧ್ಯಕ್ಷೆ ನೀರಜಾ ಅಗರವಾಲ್ , ಉಪಾಧ್ಯಕ್ಷೆ ಲತಾ ಶೇಖರ್ ಕೊಳಚಿಕಂಬಳ ಹಾಗೂ ಸದಸ್ಯರು ಹಾಜರಿದ್ದರು.
ಧಾರ್ಮಿಕ ಕಾರ್ಯಕ್ರಮಗಳಾದ ಗಣ ಹೋಮ ಹಾಗೂ ಕೆಎಸ್ ರಾವ್ ನಗರ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಭಜನಾ ಕಾರ್ಯಕ್ರಮ ನಡೆಯಿತು.
Kshetra Samachara
02/10/2022 05:20 pm