ಇದೇ ಮೊದಲ ಬಾರಿಗೆ ಹುಲಿ ಕುಣಿತ ಸ್ಪರ್ಧೆಯನ್ನು ಪುತ್ತೂರು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ನೇತೃತ್ವದಲ್ಲಿ ಆಯೋಜಿಸಲಾಗಿದೆ.
ಆಹ್ವಾನಿತ ಆರು ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಹುಲಿ ಕುಣಿತ ಪ್ರಿಯರಿಗೆ ಭರ್ಜರಿ ಮನೋರಂಜನೆಯನ್ನು ನೀಡಿತು. ಸ್ಪರ್ಧೆಯಲ್ಲಿ ಮೊದಲ ಸ್ಥಾನ ಒಡೆದ ತಂಡಕ್ಕೆ ಒಂದು ಲಕ್ಷ ರೂಪಾಯಿ ಬಹುಮಾನ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 50 ಸಾವಿರ ರೂ. ಹಾಗೂ ಭಾಗವಹಿಸಿದ ಎಲ್ಲಾ ತಂಡಗಳಿಗೆ ತಲಾ 25 ಸಾವಿರ ರೂಪಾಯಿಗಳ ಬಹುಮಾನವನ್ನು ಈ ಸ್ಪರ್ಧೆಯಲ್ಲಿ ನೀಡಲಾಗುತ್ತಿದೆ.
ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನವರಾತ್ರಿಯಲ್ಲಿ ಹಾಕಲಾಗುವ ಹುಲಿ ವೇಷಕ್ಕೆ ಅದರದ್ದೇ ಆದ ಮಹತ್ವವಿದ್ದು, ಹರಿಕೆಯ ರೂಪದಲ್ಲೂ ಹುಲಿ ವೇಷವನ್ನು ಈ ಭಾಗದಲ್ಲಿ ಹಾಕಲಾಗುತ್ತದೆ. ಇದೇ ಕಾರಣಕ್ಕಾಗಿ ಹುಲಿ ಕುಣಿತ ಸ್ವರ್ಧೆಗೆ ಅವಿಭಜಿತ ಜಿಲ್ಲೆಯಲ್ಲಿ ಜನ ಭಾರೀ ಮಹತ್ವವನ್ನೂ ನೀಡುತ್ತಿದ್ದಾರೆ.
PublicNext
01/10/2022 08:24 pm