ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧರ್ಮಸ್ಥಳ: ಕ್ರೈಸ್ತ ಮಿಷನರಿಗಳ ಸೇವೆ ಅನನ್ಯ; ಡಾ. ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ: ಕರಾವಳಿಯ ಪ್ರೊಟೆಸ್ಟೆಂಟ್ ಕ್ರೈಸ್ತರ ಪರವಾಗಿ ಕರ್ನಾಟಕ ಥಿಯೊಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ಹಾಗೂ ಕಾಸಸ್ ಸಂಸ್ಥೆಯ ಕಾರ್ಯದರ್ಶಿ ರೆ.ಡಾ. ಎಚ್.ಎಂ. ವಾಟ್ಸನ್ ರವರ ನಿಯೋಗವು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಡಾ. ವೀರೇಂದ್ರ ಹೆಗ್ಗಡೆ ರವರನ್ನು ಧರ್ಮಸ್ಥಳದಲ್ಲಿ ಗೌರವಿಸಿದರು.

ಈ ಸಂದರ್ಭ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ ಶೈಕ್ಷಣಿಕ ಕ್ರಾಂತಿ, ಕನ್ನಡದ ಬಗ್ಗೆ ಜನಂದೋಲನ ಹಾಗೂ ತಾಂತ್ರಿಕ ವರ್ಗದಲ್ಲಿ ಅದ್ವಿತೀಯ ಕಾರ್ಯಕ್ರಮಗಳು ಕರಾವಳಿ ಪ್ರದೇಶದಲ್ಲಿ ಕ್ರೈಸ್ತ ಮಿಷನರಿಗಳು ಮಾಡಿದ ಸೇವೆ ಇಂದಿಗೂ ಅವಿಸ್ಮರಣೀಯ ಎಂದರು.

ಮಾಜಿ ಸಚಿವ ಕೆ ಅಭಯ ಚಂದ್ರ ಜೈನ್, ಸಭಾ ಪಾಲಕರುಗಳಾದ ರೆ.ಡಾ. ಅನಿಲ್ ಕುಮಾರ್, ರೆ.ಡಾ. ಕ್ರೀಸ್ಟೋಫರ್ ಜಾರ್ಜ್, ಹಳೆಯಂಗಡಿಯ ಎಚ್ ವಸಂತ್ ಬರ್ನಾಡ್ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

30/08/2022 08:20 am

Cinque Terre

1.4 K

Cinque Terre

0

ಸಂಬಂಧಿತ ಸುದ್ದಿ