ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹೇಶ್ ಮರ್ಣೆ ಕೈಯಲ್ಲರಳಿತು ಬಾಟಲಿಯೊಳಗಿನ ಗಣೇಶ :ಚೌತಿಯಂದು ಪ್ರದರ್ಶನ

ಕುಂದಾಪುರ: ಖ್ಯಾತ ಕಲಾವಿದ ಮಹೇಶ್ ಮರ್ಣೆ ಕಲಾಕೃತಿ "ಬಾಟಲಿಯೊಳಗಿನ ಗಣೇಶ" ಈ ಬಾರಿ ಉಡುಪಿಯ ಮಾರುತಿ ವೀಥೀಕಾದಲ್ಲಿರುವ 22ನೇ ಗಣೇಶೋತ್ಸವ ಆಚರಣೆಯ ಸಂದರ್ಭದಲ್ಲಿ ಭಕ್ತರ ದರ್ಶನಕ್ಕೆ ಸಿದ್ಧವಾಗಿದೆ.

ಕಲಾವಿದ ಮಹೇಶ್ ಮರ್ಣೆಯವರ ಅದ್ಭುತ ಕಲಾ ಕೃತಿಯಲ್ಲಿ ಒಂದಾದ ಬಾಟಲಿಯ ಒಳಗೆ ಆವೇ ಮಣ್ಣಿನಿಂದ ಸುಮಾರು 10ವರ್ಷ ಹಿಂದೆ ರಚಿಸಲ್ಪಟ್ಟ ಗಣೇಶ ವಿಗ್ರಹವನ್ನು ಕಲಾ ಆಸಕ್ತರಿಗೆ ವೀಕ್ಷಿಸಲು ಮಾರುತಿ ವೀಥೀಕಾದ ಶ್ಯಾಮ್ ಕಾಂಪ್ಲೆಕ್ಸ್‌ನ ಮುಂಭಾಗದಲ್ಲಿ ಅವಕಾಶ ಕಲ್ಪಿಸಲಾಗಿದೆ, ಈ ಗಣಪತಿಯ ಕಲಾ ಕೃತಿಯಲ್ಲಿಯೂ ಬಣ್ಣ ಸಹಿತ ರಚನೆ ಮಾಡಿರುವುದು ಅದ್ಭುತ ಕಲಾಕೃತಿಗಳಲ್ಲಿ ಒಂದಾಗಿದೆ.

ಕಲಾಸಕ್ತರ ಬೇಡಿಕೆಯ ಮೇರೆಗೆ ಆಗಸ್ಟ್ 31ರ ಬುಧವಾರ ಚೌತಿಯ ದಿನದಂದು ಬೆಳಿಗ್ಗೆಯಿಂದ ಸಂಜೆಯ ತನಕ ಗಣಪತಿಯ ಪೆಂಡಾಲಿನಲ್ಲಿ ವೀಕ್ಷಣೆಗೆ ಇಡಲಾಗುವುದು ಕಲಾಸಕ್ತರಿಗೆ, ಸಾರ್ವಜನಿಕರಿಗೆ ವೀಕ್ಷಿಸಲು ಉಚಿತ ಅವಕಾಶ ಇದೆ ಎಂದು ಮಾರುತಿ ವೀಥೀಕಾದ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಣೇಶ್ ರಾಜ್ ಸರಳೇಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

26/08/2022 10:32 pm

Cinque Terre

4.71 K

Cinque Terre

0

ಸಂಬಂಧಿತ ಸುದ್ದಿ