ಉಡುಪಿ: ನಗರದ ದೊಡ್ಡಣಗುಡ್ಡೆಯಲ್ಲಿರುವ ರಹ್ಮಾನಿಯ್ಯ ಜುಮಾ ಮಸೀದಿಯಲ್ಲಿ ಇಂದು ಸಂಭ್ರಮದಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸಲಾಯಿತು.
ಮಸೀದಿಗೆ ಒಳಪಟ್ಟ ಮದರಸಾದ ನೂರಾರು ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಿಡಿದು ರಾಷ್ಟ್ರಗೀತೆ ಹಾಡಿದರು.ಬಳಿಕ ಮಸೀದಿ ಅಧ್ಯಕ್ಷ ಕೆಎಸ್ ಎಮ್ ಅಬ್ದುಲ್ ಖಾದರ್ ಧ್ವಜಾರೋಹಣ ಮಾಡಿದರು.
ಖಾಸಿಮ್ ಸ ಅದಿ ದುವಾ ನಿರ್ವಹಿಸಿದರೆ ,ಅಬ್ದುರ್ರಹ್ಮಾನ್ ಸ ಅದಿ ಸ್ವಾತಂತ್ರ್ಯೋತ್ಸವ ಸಂದೇಶ ಮಾಡಿದರು. ಬಳಿಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ದರ್ಗಾ ಸಮಿತಿಯ ಅಧ್ಯಕ್ಷ ಅಮಾನುಲ್ಲಾ ಸಾಹೇಬ್ ,ಮುಹಮ್ಮದ್ ಖಾಸಿಂ,ಮುಹಮ್ಮದ್ ರಫೀಕ್ ,ಮುನೀರ್ ಅಹ್ಮದ್ ,ಬಿ.ಕೆ ಅಹ್ಮದ್,ಇಬ್ರಾಹಿಂ ಮುಸ್ಲಿಯಾರ್ ,ಎಸ್ ಎಸ್ ಎಫ್ ,ಎಸ್ ವೈಎಸ್ ಸದಸ್ಯರು ಮತ್ತು ಜಮಾತ್ ಬಾಂಧವರು ಈ ಸಂದರ್ಭ ಉಪಸ್ಥಿತರಿದ್ದರು.
Kshetra Samachara
15/08/2022 07:00 pm