ಉಳ್ಳಾಲ: ಉಳ್ಳಾಲದ ಹೆಬ್ಬಾಗಿಲಾದ ತೊಕ್ಕೊಟ್ಟು ಓವರ್ ಬ್ರಿಡ್ಜಲ್ಲಿ ಸ್ಥಾಪನೆಗೊಂಡ 110 ಅಡಿ ಎತ್ತರದ ಧ್ವಜ ಸ್ಥಂಭದಲ್ಲಿ ಮೊದಲ ಬಾರಿಗೆ ಗಜಗಾತ್ರದ ರಾಷ್ಟ್ರ ಧ್ವಜ ಬಾನೆತ್ತರಕ್ಕೆ ಹಾರಿದೆ.
ಉಳ್ಳಾಲ ನಗರಸಭಾ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್ ಅವರು ಉಳ್ಳಾಲವು ತಾಲೂಕಾಗಿ ಬೇರ್ಪಟ್ಟ ನಂತರ ನೂತನ 110 ಅಡಿ ಧ್ವಜ ಸ್ಥಂಭದಲ್ಲಿ ಮೊದಲ ಧ್ವಜಾರೋಹಣಗೈದ ಜನಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಬಾಜನರಾದರು. ಸ್ವಿಚ್ ಅದುಮುವ ಮೂಲಕ ಅವರು ಧ್ವಜಾರೋಹಣಗೈದರು.
ಶಾಸಕ ಯು.ಟಿ.ಖಾದರ್ ಮಾತನಾಡಿ ಉಳ್ಳಾಲದ ಜನರ ದೇಶಪ್ರೇಮ, ಸ್ವಾಭಿಮಾನದ ಸಂಕೇತವಾಗಿ ಶಾಶ್ವತವಾಗಿ ಈ ರಾಷ್ಟ್ರಧ್ವಜ 24 ಗಂಟೆ ಹಾರಾಡಲಿದೆ.75ರ ಸ್ವಾತಂತ್ರ್ಯ ಸಂಭ್ರಮದಲ್ಲಿ ನಮಗೆ ಪಾಲ್ಗೊಳ್ಳಲು ಅವಕಾಶ ದೊರಕಿದ್ದು ನಮ್ಮೆಲ್ಲರ ಭಾಗ್ಯ.ಮುಂದಿನ ದಿವಸಗಳಲ್ಲಿ ನಾವು ದ್ವೇಷ ಎಂಬ ಪದವನ್ನ ಹೃದಯದಿಂದಲೇ ಕಿತ್ತೆಸೆಯುವ ಕಾರ್ಯ ನಡೆಸಿ ಎಲ್ಲರೂ ಜತೆಗೂಡಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಬೇಕೆಂದು ಕರೆ ನೀಡಿದರು. ಧ್ವಜಾರೋಹಣಕ್ಕೂ ಮುನ್ನ ಉಳ್ಳಾಲ ರಾಣಿ ಅಬ್ಬಕ್ಕ ವೃತ್ತದಿಂದ ತೊಕ್ಕೊಟ್ಟಿನ ವರೆಗೆ ತಿರಂಗ ಯಾತ್ರೆ ನಡೆಯಿತು.
Kshetra Samachara
15/08/2022 02:37 pm