ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಆಟಿಡ್ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ

ಬಂಟ್ವಾಳ: 75ನೇ ಸ್ವಾತಂತ್ರ್ಯ ಅಮೃತಮಹೋತ್ಸವದ ಪ್ರಯುಕ್ತ, ಮಾಜಿ ಸಚಿವ ರಮಾನಥ ರೈ ಅವರ ಗೌರವ ಅಧ್ಯಕ್ಷತೆ ಹಾಗೂ ಪಿಯೂಸ್ ಎಲ್ ರೋಡ್ರಿಗಸ್ ಅಧ್ಯಕ್ಷತೆಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಅಟಿ ಕೂಟ ಸಮಿತಿ ಆಯೋಜಿಸಿದ್ದ ಪಂಜಿ ಕಲ್ಲು ಬಾಲೇಶ್ವರ ಗರಡಿ ಗದ್ದೆಯಲ್ಲಿ ಆಟಿಡ್ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ನಡೆಯಿತು.

ಬಾಲೇಶ್ವರ ಬಸದಿಯಲ್ಲಿ ಪೂಜೆ ಸಲ್ಲಿಸಿ ಆಟದ ಗದ್ದೆಯಲ್ಲಿ ಕಂಬಳ ಕೋಣ ಇಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತುಳುನಾಡಿನ ಪರಂಪರೆಯ ಆಟೋಟಗಳನ್ನು ಏರ್ಪಡಿಸಲಾಗಿತ್ತು. ಬಂಟ್ವಾಳ ವಿಧಾನ ಸಭಾ ವ್ಯಾಪ್ತಿಯ ಅಂತರ್ ಪಂಚಾಯತ್ ತಂಡಗಳ ನಡುವೆ ಹಗ್ಗ ಜಗ್ಗಾಟ, ಬಾಲ್ ಎಸೆತ, ಅಡಿಕೆ ಹಾಳೆಯಲ್ಲಿ ಎಳೆತ ಸೇರಿದಂತೆ ತುಳುನಾಡಿನ ಪಾರಂಪರಿಕ ಆಟಗಳಲ್ಲಿ ಹಿರಿಯರು, ಮಹಿಳೆಯರು, ಯುವಕಯುವತಿಯರು ಸೇರಿದಂತೆ ಮಕ್ಕಳು ಭಾಗವಹಿಸಿ ಎಂಜಾಯ್ ಮಾಡಿದ್ರು.

Edited By : Manjunath H D
Kshetra Samachara

Kshetra Samachara

15/08/2022 10:27 am

Cinque Terre

13.61 K

Cinque Terre

0

ಸಂಬಂಧಿತ ಸುದ್ದಿ