ಮುಲ್ಕಿ:ತುಳುನಾಡಿನಲ್ಲಿ ಪೂಜಾ ಕೈಂಕರ್ಯ ಸಹಿತ ದೈವರಾದನೆಯಲ್ಲಿ"ಕೇಪಳದ ಹೂವು ವಿಶೇಷ ಸ್ಥಾನಮಾನವನ್ನು ಪಡೆದಿದೆ.
ಈಗೀಗ ವಿವಿಧ ಬಗೆಯ ಕೇಪುಳ ಹೂವು ಬಂದಿದ್ದರೂ, ಕಾಡು ಕೇಪುಳ ಹೂವಿಗೆ ಬೇಡಿಕೆ ಹೆಚ್ಚು, ತುಳುನಾಡಿನಲ್ಲಿ ದುರ್ಗಾ ನಮಸ್ಕಾರ, ತ್ರಿಕಾಲ ಪೂಜೆ ಸಹಿತ ವಿವಿಧ ರೀತಿಯ ದೇವರ ಆರಾಧನೆಗೆ ಕೇಪುಳ ಹೂವನ್ನು ಉಪಯೋಗಿಸುತ್ತಾರೆ.
ವಿಶೇಷವೆಂದರೆ ವರ್ಷವಿಡೀ ಸಿಗುವ ಈ ಹೂವು ಆಶಾಡ ಮಾಸದಲ್ಲಿ ಮಾತ್ರ ಕಾಣಸಿಗುವುದಿಲ್ಲ, ತುಳುವರ ನಂಬಿಕೆ ಪ್ರಕಾರ ಆಷಾಢ ಮಾಸದಲ್ಲಿ ಕೇಪುಳ ಹೂವು ತಾಯಿ ಮನೆಗೆ ಹೂಗುತ್ತದೆಯಂತೆ, ಆದರಿಂದ ಆಟಿ ತಿಂಗಳಲ್ಲಿ ಕೇಪುಳ ಹೂವು ಕಾಣ ಸಿಗುವುದಿಲ್ಲ ಎಂಬುದು ತುಳುವರ ವಿಶೇಷ ನಂಬಿಕೆ.
Kshetra Samachara
02/08/2022 07:07 pm