ಕುಂದಾಪುರ: ಕುಂದಗನ್ನಡ ಭಾಷೆಯ ಮೇಲಿನ ಅಭಿಮಾನದಿಂದ ಕುಂದಾಪ್ರ ಕನ್ನಡ ಭಾಷಿಗರು ಒಂದಷ್ಟು ಮಂದಿ ಒಟ್ಟಾಗಿ ಆರಂಭಿಸಿದ ವಿಶ್ವ ಕುಂದಾಪ್ರ ಕನ್ನಡ ದಿನ ನಾಲ್ಕನೇ ವರ್ಷದ ಸಂಭ್ರಮದಲ್ಲಿದ್ದು ವಿಶ್ವದ ವಿವಿಧೆಡೆ ಪ್ರತಿವರ್ಷ ಆಚರಿಸಲ್ಪಡುತ್ತಿದೆ.
ಜುಲೈ 28ರಂದು ಆಷಾಢ ಅಮಾವಾಸ್ಯೆ ದಿನ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಪ್ರಯುಕ್ತ ಜಾಲತಾಣ ಹಾಗೂ ಭೌತಿಕವಾಗಿ ವಿವಿಧೆಡೆ ತಯಾರಿ ನಡೆಯುತ್ತಿದೆ.
ಜುಲೈ 30ರಂದು ಬ್ರಹ್ಮಾವರ ತಾಲೂಕಿನ ಶಿರಿಯಾರದಲ್ಲಿ ಕುಂದಗನ್ನಡ ಕಂಬಳೋತ್ಸವ ರೂಪಿಸಲಾಗಿದೆ. ಚಂದಾ ಗ್ವಾಂಪಿ ಎಂಬ 5ರಿಂದ 14 ವರ್ಷದ ಒಳಗಿನ ಮಕ್ಕಳ ಛದ್ಮವೇಷ ಸ್ಪರ್ಧೆ ನಡೆಯಲಿದೆ.ತೆಕ್ಕಟ್ಟೆ,ಕುಂದಾಪುರ,ಕಾರ್ಕಳ, ದುಬೈ,ಬೆಂಗಳೂರು ಧಾರವಾಡ ಮೊದಲಾದೆಡೆ ಕಾರ್ಯಕ್ರಮಗಳು ನಡೆಯಲಿವೆ.
PublicNext
26/07/2022 02:46 pm