ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಪರಿಸರ ಸಂರಕ್ಷಣೆ ನಿರಂತರವಾಗಿ ನಡೆಯಲಿ; ಉದಯ ಅಮೀನ್

ಮುಲ್ಕಿ:ಯುವವಾಹಿನಿ (ರಿ ) ಘಟಕದ ಆಶ್ರಯ ದಲ್ಲಿ ಚರಂತಿಪೇಟೆ ಕೋಟೆಕೊಪ್ಪಲ ಬಬ್ಬು ಸ್ವಾಮಿ ದೈವಸ್ಥಾನದ ವಠಾರ ದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.

ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಉದಯ್ ಅಮೀನ್ ಮಟ್ಟು ರವರು ಗಿಡ ನೆಡುವುದರ ಮುಖೇನ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ವನಮಹೋತ್ಸವದ ಮೂಲಕ ಪರಿಸರ ಸಂರಕ್ಷಣೆ ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕಾಧ್ಯಕ್ಷೆ ಭಾರತಿ ಭಾಸ್ಕರ್ ಕೋಟ್ಯಾನ್ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ಬಬ್ಬು ಸ್ವಾಮಿ ದೈವಸ್ಥಾನದ ಆಡಳಿತ ಸಮಿತಿಯ ಗೌರವಾಧ್ಯಕ್ಷ ಯದೀಶ್ ಅಮೀನ್ ಕೊಕ್ಕರಕಲ್, ಆಡಳಿತ ಸಮಿತಿ ಯ ಅಧ್ಯಕ್ಷ ಅಶೋಕ್ ಕರ್ಕೇರ, ಯುವವಾಹಿನಿ ಮುಲ್ಕಿ ಘಟಕದ ಕಾರ್ಯದರ್ಶಿ ಜಾಹ್ನವಿ ಮೋಹನ್, ಕಾರ್ಯಕ್ರಮ ನಿರ್ದೇಶಕಿ ರಾಜೇಶ್ವರಿ ನಿತ್ಯಾನಂದ ಉಪಸ್ಥಿತರಿದ್ದರು ಮೋಹನ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

11/07/2022 07:57 pm

Cinque Terre

1.47 K

Cinque Terre

0

ಸಂಬಂಧಿತ ಸುದ್ದಿ