ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪ್ರಜಾಪ್ರಭುತ್ವದ ಕಾವಲು ನಾಯಿ ಎನಿಸಿಕೊಂಡ ಮಾಧ್ಯಮ ಪ್ರತಿನಿಧಿಗಳದ್ದು ನಾಯಿ ಪಾಡು: ರಾಜೇಶ್ ಶೆಟ್ಟಿ

ಉಡುಪಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮ ಕ್ಷೇತ್ರವನ್ನು ಕಾವಲು ನಾಯಿ ಎಂದು ಕರೆಯಲಾಗುತ್ತದೆ.ಆದರೆ ಪತ್ರಕರ್ತರದ್ದು ಅಕ್ಷರಶಃ ನಾಯಿ ಪಾಡು ಎಂದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಹೇಳಿದ್ದಾರೆ.

ಉಡುಪಿಯ ಮಣಿಪಾಲ್ ಇನ್ ಹೊಟೇಲಿನ ಸಭಾಂಗಣದಲ್ಲಿ ಅವರು ಪತ್ರಿಕಾ ದಿನದ ಪ್ರಯುಕ್ತ ಮಾತನಾಡುತ್ತಿದ್ದರು.ಕೊರೋನಾ ನಂತರ ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಸ್ತಿತ್ಯಂತರಗಳಾಗಿದ್ದು ಹಲವು ಪತ್ರಕರ್ತರು ನೌಕರಿ‌ ಕಳೆದುಕೊಂಡು ಮನೆ ಸೇರಿದ್ದಾರೆ.ಹಿಂದೆ ಸುದ್ದಿ ಬರುತ್ತಿದ್ದ ಜಾಗದಲ್ಲಿ ಇವತ್ತು ಜಾಹೀರಾತು ಬರುತ್ತಿದೆ.ಅದು ಮಾಧ್ಯಮ ಸಂಸ್ಥೆಗಳ ಉಳಿವಿಗೆ ಮುಖ್ಯವೂ ಹೌದು.ಸರಕಾರ ಪತ್ರಕರ್ತರ ಕಲ್ತಾಣಕ್ಕೆ ನಿರೀಕ್ಷಿತ ಸಹಕಾರ ನೀಡಿಲ್ಲ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸಿಇಓ ಪ್ರಸನ್ನ ಎಚ್ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ವಾರ್ತಾಧಿಕಾರಿ ಮಂಜುನಾಥ್, ಮಹಾವೀರ ಏಜೆನ್ಸಿ ಮುಖ್ಯಸ್ಥ ಸುಧಾಕರ್ ಶೆಣೈ, ಕಿರಣ್ ಮಂಜನಬೈಲು, ಅರುಣ್ ಕುಮಾರ್ ಶಿರೂರು, ನಝೀರ್ ಪೊಲ್ಯ, ಉಮೇಶ್ ಮಾರ್ಪಳ್ಳಿ ಮತ್ತಿತರರು ಉಪಸ್ಥಿತರಿದ್ದರು. ಪತ್ರಕರ್ತ ಚೇತನ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

Edited By : Shivu K
Kshetra Samachara

Kshetra Samachara

01/07/2022 12:22 pm

Cinque Terre

21.59 K

Cinque Terre

3

ಸಂಬಂಧಿತ ಸುದ್ದಿ