ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಸ್ವಚ್ಛ,ಸ್ಪಷ್ಟ ಭಾಷೆ ಮತ್ತು ಜ್ಞಾನವಿಲ್ಲದಿದ್ದರೆ ಮಾತುಗಾರನಾಗಲು ಸಾಧ್ಯವಿಲ್ಲ!

ಉಳ್ಳಾಲ: ಸ್ವಚ್ಛ,ಸ್ಪಷ್ಟ ಭಾಷೆ ಮತ್ತು ವಿಷಯದ ಬಗ್ಗೆ ಜ್ಞಾನವಿಲ್ಲದಿದ್ದರೆ ಯಾರೂ ಉತ್ತಮ ಮಾತುಗಾರನಾಗಲು ಸಾಧ್ಯವಿಲ್ಲ.ಇದು ಸಭಾ ಕಾರ್ಯಕ್ರಮ ನಿರೂಪಕರಿಗೂ ಅನ್ವಯಿಸುವುದು ಎಂದು ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ರವೀಂದ್ರ ರೈ ಕಲ್ಲಿಮಾರ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ ಮತ್ತು ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದೊಂದಿಗೆ ಶನಿವಾರದಂದು ದೇರಳಕಟ್ಟೆಯ ವಿದ್ಯಾರತ್ನ ಶಾಲೆಯಲ್ಲಿ ನಡೆದ "ಕನ್ನಡ ಸಂಭ್ರಮ" ದ ಪ್ರಯುಕ್ತ ಮಾರ್ಗದರ್ಶಿ ಉಪನ್ಯಾಸ,ಕನ್ನಡ ಸ್ಫರ್ಧೆಗಳು,ಜಾನಪದ ನೃತ್ಯ ಕಾರ್ಯಕ್ರಮವನ್ನ ಉದ್ದೇಶಿಸಿ ಅವರು ಮಾತನಾಡಿದರು.

ಸಭಾ ಕಾರ್ಯಕ್ರಮಗಳಿಗೆ ಅದರದೇ ಆದ ಶಿಷ್ಟಾಚಾರ ಇರುತ್ತೆ.ಆ ಶಿಷ್ಟಾಚಾರವನ್ನ ಪಾಲಿಸಿ ಕಾರ್ಯಕ್ರಮದ ಬಗ್ಗೆ ಜ್ಞಾನ ,ಅಜೆಂಡ ತಿಳಿದು ಸುಲಲಿತ ಭಾಷೆಯೊಂದಿಗೆ ನಿರೂಪಣೆ ಮಾಡುವುದು ಸಭಾ ನಿರೂಪಕನ ಜವಬ್ದಾರಿ ಎಂದರು.

ರಾಜ್ಯ ಅಲೆಮಾರಿ,ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ಕಾರ್ಯಕ್ರಮ ಉದ್ಘಾಟಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷರಾದ ಧನಂಜಯ ಕುಂಬ್ಳೆ ಸಭಾಧ್ಯಕ್ಷತೆ ವಹಿಸಿದ್ದರು.ವಿದ್ಯಾರತ್ನ ಶಾಲಾ ಕಾರ್ಯದರ್ಶಿ ಸೌಮ್ಯಾ ಆರ್.ಶೆಟ್ಟಿ, ದೇರಳಕಟ್ಟೆಯ ಹೊಟೇಲ್ ಉದ್ಯಮಿ ಲಯನ್. ಚಂದ್ರಹಾಸ್ ಶೆಟ್ಟಿ.ಉಳ್ಳಾಲ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಡ್ವರ್ಡ್ ಲೋಬೋ ಮೊದಲಾದವರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

04/06/2022 05:32 pm

Cinque Terre

4.58 K

Cinque Terre

0

ಸಂಬಂಧಿತ ಸುದ್ದಿ