ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ: ಕಟೀಲು ದೇವಳದಲ್ಲಿ ಇಂದು 35 ಜೋಡಿಗಳ ಸರಳ ವಿವಾಹ

ಬಜಪೆ: ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು 35 ಜೋಡಿಗಳಿಗೆ ಸರಳ ವಿವಾಹ ಕಾರ್ಯಕ್ರಮವು ನಡೆಯಿತು. ಬೆಳಿಗ್ಗಿನಿಂದಲೇ ಆರಂಭಗೊಂಡ ವಿವಾಹ ಮುಹೂರ್ತಗಳು ಮಧ್ಯಾಹ್ನದ ತನಕ ನಡೆದವು. ನಂತರ ದೇವಸ್ಥಾನದ ಅನ್ನ ಛತ್ರದಲ್ಲಿ ಭಕ್ತಾದಿಗಳು ಸೇರಿ ಸಾವಿರಾರು ಮಂದಿ ಅನ್ನ ಪ್ರಸಾದವನ್ನು ಸ್ವೀಕರಿಸಿದರು.

ದೇವಳದಲ್ಲಿ ನಡೆಯುವ ವಿವಾಹ ಕಾರ್ಯಕ್ರಮಕ್ಕೆ ಅರ್ಚಕರು ಹಾಗೂ ಪ್ರತ್ಯೇಕ ಕೌಂಟರ್‌ಗಳ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಮದುವೆ ದಿಬ್ಬಣಿಗರು ಹಾಗೂ ದೇವಸ್ಥಾನಕ್ಕೆ ಬರುವಂತಹ ಭಕ್ತಾದಿಗಳ ವಾಹನಗಳ ನಿಲುಗಡೆಗಾಗಿ ದೇವಸ್ಥಾನದ ರಥಬೀದಿ, ಇಲ್ಲಿನ ಬಸ್ಸು ನಿಲ್ದಾಣದ ಬಳಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಇಂದು ಶುಕ್ರವಾರ ವಾದ್ದರಿಂದ ದೇವಳಕ್ಕೆ ಬರುವಂತಹ ಭಕ್ತಾದಿ ಗಳ ಸಂಖ್ಯೆ ಕೂಡ ಹೆಚ್ಚಳವಾಗಿತ್ತು.

Edited By : Manjunath H D
Kshetra Samachara

Kshetra Samachara

13/05/2022 06:44 pm

Cinque Terre

5.67 K

Cinque Terre

0

ಸಂಬಂಧಿತ ಸುದ್ದಿ