ಮುಲ್ಕಿ: ಕಿನ್ನಿಗೋಳಿ ಸಮೀಪದ ಮೂರುಕಾವೇರಿಯ ಒಂಬತ್ತು ಮಾಗಣೆಯ ಶ್ರೀ ಮಹಮ್ಮಾಯೀ ದೇವಸ್ಥಾನ ದ ವರ್ಷಾವಧಿ ಮಾರಿಪೂಜೆ ಪ್ರಯುಕ್ತ ಕಿನ್ನಿಗೋಳಿ ಕಟ್ಟೆಯಲ್ಲಿ ವಿಶೇಷ ಪ್ರಾರ್ಥನೆ, ಶ್ರೀ ದೇವಿಯ ಬಿಂಬ ಪ್ರತಿಷ್ಠೆ ಹಾಗೂ ವಿಶೇಷ ಪೂಜೆ ನಡೆಯಿತು.
ದೇವಸ್ಥಾನದಲ್ಲಿ ಮಧ್ಯಾಹ್ನ ಮಹಾ ಪೂಜೆ ಹಾಗೂದರ್ಶನ ಸೇವೆ ರಾತ್ರಿ ದೇವಸ್ಥಾನದಲ್ಲಿ ಕಲ್ಲುರ್ಟಿ ಪಂಜುರ್ಲಿ ದೈವದ ನೇಮೋತ್ಸವ, ಕಿನ್ನಿಗೋಳಿ ಕಟ್ಟೆಯಲ್ಲಿ ದರ್ಶನ ಸೇವೆ, ಶ್ರೀ ಮಹಾಮ್ಮಾಯೀ ದೇವಿಯ ಬಿಂಬದ ಮೆರವಣಿಗೆ ಕಿನ್ನಿಗೋಳಿ ಕಟ್ಟೆಯಿಂದ ಹೊರಟು ಮೂರುಕಾವೇರಿ ಮಹಮ್ಮಾಯೀ ದೇವಸ್ಥಾನದ ತನಕ ನಡೆಯಿತು. ರಾತ್ರಿ ಭಜನೆ , ಅರಮನೆ ಪೂಜೆ , ದೇವಿ ದೈವದ ಬೇಟಿ, ರಾಶಿ ಪೂಜೆ ನಡೆಯಿತು.
ಮೇ. 4 ರಂದು ದರ್ಶನ ಸೇವೆ , ವಿಸರ್ಜನಾ ಪೂಜೆ , ಬಿಂಬದ ವಿಸರ್ಜನೆ , ಮೇ. 5 ರಂದು ಬೆಳಿಗ್ಗೆ ಗುಳಿಗ ದೈವದ ನೇಮ ನಡೆಯಲಿದೆ
Kshetra Samachara
03/05/2022 03:12 pm