ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿಲ್ಪಾಡಿ: ಯುಗಾದಿ ಆಚರಣೆ; ನೂತನ ಕಸಾಪ ಅಧ್ಯಕ್ಷರಿಗೆ ಕ್ಷೇತ್ರದಿಂದ ಗೌರವ

ಮುಲ್ಕಿ: ಮುಲ್ಕಿ ಸಮೀಪದ ಕಿಲ್ಪಾಡಿ ಸಾಲ್ಯಾನ್ ಶ್ರೀ ನಾಗಬ್ರಹ್ಮಸ್ಥಾನದಲ್ಲಿ ಚಾಂದ್ರಮಾನ ಯುಗಾದಿ ಆಚರಣೆ ಮಾನಂಪಾಡಿ ರಾಘವೇಂದ್ರ ಭಟ್ ನೇತೃತ್ವದಲ್ಲಿ ನಡೆಯಿತು.

ಪ್ರಾತಃಕಾಲ ದೇವತಾ ಪ್ರಾರ್ಥನೆ, ಪಂಚಗೌವ್ಯ, ಪಂಚಾಮೃತ ಅಭಿಷೇಕ, ನವಕ ಕಲಶಾಭಿಷೇಕ, ಆಷ್ಲೇಶ ಪೂಜೆ, ತಿರುಪತಿ ದೇವರಿಗೆ ಮುಡಿಪು ಕಟ್ಟುವುದು, ನಾಗತಂಬಿಲ ಸೇವೆ, ಪ್ರಸಾದ ವಿತರಣೆ ನಡೆದು ಮಹಾ ಅನ್ನಸಂತರ್ಪಣೆ ನಡೆಯಿತು.

ದಾನಿಗಳಾದ ಹೆಜಮಾಡಿ ಸಾವಿತ್ರಿ ಡಿ ಸಾಲ್ಯಾನ್ ಹಾಗೂ ಮಣಿಪಾಲ ದಿವಾಕರ ಸಾಲ್ಯಾನ್ ರವರಿಂದ ಶ್ರೀ ಧೂಮಾವತಿ ಹಾಗೂ ಅಣ್ಣಪ್ಪ ಪಂಜುರ್ಲಿ ದೈವದ ಮೊಗಕ್ಕೆ ಬೆಳ್ಳಿಯ ದಂಡಮಾಲೆಯನ್ನು ಸೇವಾರೂಪವಾಗಿ ಸಮರ್ಪಿಸಲಾಯಿತು, ನಾಗಬ್ರಹ್ಮಸ್ಥಾನದಲ್ಲಿ ಬಪ್ಪನಾಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಯವರ ದಿವ್ಯಹಸ್ತದಲ್ಲಿ ಶ್ರೀಮಾತೆ ರಕ್ತೆಶ್ವರಿಗೆ ದುರ್ಗಾ ನಮಸ್ಕಾರ ಪೂಜೆ ಮತ್ತು ಪ್ರಸಾದ ವಿತರಣೆ ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ನೂತನವಾಗಿ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಿ ಆಯ್ಕೆಯಾದ ನಾಗಬ್ರಹ್ಮಸ್ಥಾನದ ಅಧ್ಯಕ್ಷ ವಿಶ್ವನಾಥ ಸಾಲ್ಯಾನರವರನ್ನು ಗೌರವಿಸಲಾಯಿತು.ಯುವ ನಾಯಕ ಮಿಥುನ್ ರೈ, ಮಲ್ಪೆ ಗೋಪಾಲ ಸಾಲ್ಯಾನ್ ಮತ್ತು ವಾಮಂಜೂರು ವಿಠಲ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

04/04/2022 09:54 pm

Cinque Terre

2.35 K

Cinque Terre

0

ಸಂಬಂಧಿತ ಸುದ್ದಿ