ಮುಲ್ಕಿ:ಮುಲ್ಕಿ ಒಳಲಂಕೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಮೂಲ ಮುದ್ರಾ ಜೀರ್ಣೋದ್ಧಾರದ 5ನೇ ವರ್ಷದ ಸವಿನೆನಪಿಗಾಗಿ ಶ್ರೀ ದೇವರ ಸಾನ್ನಿಧ್ಯ ಅಭಿವೃದ್ಧಿಯ ಬಗ್ಗೆ ಹಾಗೂ ಮಹಾಜನರ ಶ್ರೇಯೋಭಿವೃದ್ಧಿಯ ಬಗ್ಗೆ ಅರ್ಚಕರಾದ ವೇದಮೂರ್ತಿ ವೆಂಕಟೇಶ್ ಭಟ್, ಪದ್ಮನಾಭ ಭಟ್, ರಾಜೇಶ್ ಭಟ್, ಪೃಥ್ವಿಶ್ ಭಟ್ ನೇತೃತ್ವದಲ್ಲಿ ರುದ್ರಯಾಗ ಸಹಿತ ಬೈರವ ಹವನ ನಡೆಯಿತು.
ಬೆಳಿಗ್ಗೆ 9 ಗಂಟೆಗೆ ವಿಶೇಷ ಪ್ರಾರ್ಥನೆ ಹಾಗೂ ಹವನಕ್ಕೆ ಚಾಲನೆ ನೀಡಲಾಯಿತು. ಮಧ್ಯಾಹ್ನ 12 ಗಂಟೆಗೆ ಹವನ ಪೂರ್ಣಾಹುತಿ, ಬಳಿಕ ಮಹಾ ನೈವೇದ್ಯ, ಮಂಗಳಾರತಿ, ದರ್ಶನ ಸೇವೆ, ಭೂರಿ ಸಮಾರಾಧನೆ ನಡೆಯಿತು.ಈ ಸಂದರ್ಭ ಸೇವಾದಾರರಾದ ಎಮ್ ವಾಸುದೇವ ಆರ್ ಕುಡ್ವಾ, ಪದ್ಮಾ ಕುಡ್ವ, ಅತುಲ್ ಕುಡ್ವಾ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
21/03/2022 04:42 pm