ಮುಲ್ಕಿ: ಮುಲ್ಕಿ ಸಮೀಪದ ಚರಂತಿಪೇಟೆ ಕೋಟೆಕೊಪ್ಪಲ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ದಲ್ಲಿ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ 19ನೇ ವರ್ಷದ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.
ಶನಿವಾರ ಮಧ್ಯಾಹ್ನ ಚಪ್ಪರ ಮಹೂರ್ತ ನಡೆದು ಜಯಶ್ರೀ ಮೋಹನದಾಸ ಹೆಜಮಾಡಿ ಸೇವಾರ್ಥ ಮಹಾ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಭಂಡಾರ ಇಳಿದು ಶ್ರೀ ಬಬ್ಬುಸ್ವಾಮಿ ತನ್ನಿಮಾನಿಗ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭ ದೈವಸ್ಥಾನದ ಅಧ್ಯಕ್ಷ ಮಹೇಶ್ ಕೋಟ್ಯಾನ್, ಕಾರ್ಯದರ್ಶಿ ಮೋಹನ್ ಸುವರ್ಣ, ಕೋಶಾಧಿಕಾರಿ ಎಂ ಗೋಪಾಲ್, ಮಧ್ಯಸ್ಥ ಗೋಪಿನಾಥ ಪಡಂಗ, ಯದೀಶ್ ಅಮೀನ್ ಕೊಕ್ಕರಕಲ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
13/03/2022 06:19 am