ಮುಲ್ಕಿ:ಶ್ರೀ ರಾಮಕೃಷ್ಣ ಕಾಲೇಜು ಎನ್ಎಸ್ಎಸ್ ಘಟಕಗಳು ಮಂಗಳೂರು, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ,ಮಂಗಳೂರು ಹಾಗೂ ಮುಲ್ಕಿ ಅರಮನೆ ಸಂಯುಕ್ತ ಆಶ್ರಯದಲ್ಲಿ ಪಡುಪಣಂಬೂರು ಶ್ರೀ ಅನಂತ ನಾಥ ಸ್ವಾಮಿ ಬಸದಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಜರಗಿತು.
ಈ ಕಾರ್ಯಕ್ರಮಕ್ಕೆ ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಚಾಲನೆ ನೀಡಿ ಮಾತನಾಡಿ ಪರಿಸರ ಸ್ವಚ್ಛತೆ ಮೂಲಕ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘಟನೆಗಳ ಕಾರ್ಯ ಅಭಿನಂದನೀಯ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮುಲ್ಕಿ ಅರಮನೆಯ ಎಂ ಗೌತಮ್ ಜೈನ್,ಎನ್ಎಸ್ಎಸ್ ಯೋಜನಾಧಿಕಾರಿ ನಟೇಶ್ ಆಳ್ವ ಕೆ, ವಿಜಿ ಬಟ್, ರಾಘವೇಂದ್ರ, ಪ್ರವೀಣ್ ಜೈನ್,ಧನಲಕ್ಷ್ಮಿ ಹಾಗೂ ಎನ್ಎಸ್ಎಸ್ ವಿದ್ಯಾರ್ಥಿಗಳು ಭಾಗವಹಿಸಿದರು.
Kshetra Samachara
08/03/2022 02:12 pm