ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಚೇರ್ಕಾಡಿಯಲ್ಲಿ ಪ್ರೇರಣ ಪ್ರಶಸ್ತಿ 2021: ಸಾಧಕರಿಗೆ ಸನ್ಮಾನ

ಚೇರ್ಕಾಡಿ: ಪ್ರೇರಣ ಸಾಂಸ್ಕೃತಿಕ ಕಲಾ ಟ್ರಸ್ಟ್ ಮೂಡುವಾರಣಾಸಿಯಿಂದ ಚೇರ್ಕಾಡಿಯಲ್ಲಿ ಪ್ರೇರಣ ಪ್ರಶಸ್ತಿ 2021 ಜರುಗಿತು. ಬ್ರಹ್ಮಾವರ ತಾಲೂಕು ತಹಶೀಲ್ದಾರ್ ರಾಜಶೇಖರ ಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಾಸ್ತು ಮತ್ತು ಜಲ ತಜ್ಞ ಡಾ.ಅನಂತ ನಾಯ್ಕ್ ಮತ್ತು ಬ್ರಹ್ಮಾವರದಿಂದ ಕಾಲ್ನಡಿಗೆ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಿ ಇಲ್ಲಿನ ಜನಪದ ಕಲೆ ಹುಲಿ ಕುಣಿತವನ್ನು ಪರಿಚಯಿಸಿದ ಹರ್ಷೆಂದ್ರ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜಶೇಖರ ಮೂರ್ತಿ, ನಮ್ಮಲ್ಲಿ ಸಮೂಹ ನಾಯಕತ್ವದ ಕೊರತೆ ಇದೆ. ಅದು ಸಂಘ ಸಂಸ್ಥೆಯಾಗಿರಬಹುದು ಅಥವಾ ವ್ಯಕ್ತಿಯಲ್ಲಿ ಕೂಡಾ ಇರಬಹುದು . ಸಾಮೂಹಿಕ ನಾಯಕತ್ವ ಇಂತಹ ಗ್ರಾಮೀಣ ಭಾಗದ ಇಂತಹ ಕಲಾ ಸಂಘಟನೆಯಿಂದ ಆರಂಭಗೊಂಡು ಊರಿಗೆ ,ದೇಶಕ್ಕೇ ಮಾದರಿಯಾಗ ಬೇಕು ಎಂದರು.

ಸಂಸ್ಥೆಯ ಅಧ್ಯಕ್ಷ ಅರುಣ್ ಕುಮಾರ್ ನಾಯ್ಕ್ , ಚೇರ್ಕಾಡಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹರೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು

Edited By : Shivu K
Kshetra Samachara

Kshetra Samachara

02/03/2022 08:21 pm

Cinque Terre

10.16 K

Cinque Terre

0

ಸಂಬಂಧಿತ ಸುದ್ದಿ