ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ವಿದ್ಯಾ ನಿಧಿಯ ಮೂಲಕ ಕಲಿಯುವಿಕೆ ಗೆ ಸಂಘಟನೆಯ ಪ್ರೋತ್ಸಾಹ ಶ್ಲಾಘನೀಯ: ಸುನಿಲ್ ಆಳ್ವ

ಮುಲ್ಕಿ: ಬಪ್ಪನಾಡು ಬಡಗುಹಿತ್ಲು ಯುವಕ ಯುವತಿ ಮಂಡಲದ ವಾರ್ಷಿಕೋತ್ಸವ ಸಮಾರಂಭ ಯುವಕ ಮಂಡಲದ ರಂಗ ವೇದಿಕೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮಂಡಲಾಧ್ಯಕ್ಷ ಸುನಿಲ್ ಆಳ್ವ ವಹಿಸಿ ಮಾತನಾಡಿ ವಿದ್ಯಾ ನಿಧಿಯ ಮೂಲಕ ಮಕ್ಕಳ ಕಲಿಕೆ ಗೆ ಸಂಘಟನೆಯ ಪ್ರೋತ್ಸಾಹ ಶ್ಲಾಘನೀಯವಾಗಿದ್ದು ಸಾಮಾಜಿಕ ಕೈಂಕರ್ಯ ಅನುಕರಣೀಯ ಎಂದರು

ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮುಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ಸದಸ್ಯೆ ದಯಾವತಿ ಅಂಚನ್, ಲಯನ್ಸ್ ಕ್ಲಬ್ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು, ಉದ್ಯಮಿ ಸತೀಶ್ ಶೆಟ್ಟಿ ಬಪ್ಪನಾಡು, ಮಂಗಳೂರು ಕೆಪಿಟಿ ಲೈಬ್ರೇರಿಯನ್ ಗೀತಾ ಚಂದ್ರಹಾಸ ಶೆಟ್ಟಿ, ಯುವಕ ಮಂಡಲದ ಅಧ್ಯಕ್ಷ ಅರುಣ್ ಅಂಚನ್ , ಯುವತಿ ಮಂಡಲದ ಅಧ್ಯಕ್ಷೆ ಮಮತಾ , ಉದ್ಯಮಿ ಕಮಲಾಕ್ಷ ಬಡಗಿತ್ಲು,ಮತ್ತಿತರರು ಉಪಸ್ಥಿತರಿದ್ದರು. ಲಿಖಿತ ಅಂಚನ್ ಧನ್ಯವಾದ ಅರ್ಪಿಸಿದರು. ಮೋಹನ್ ಸುವರ್ಣ ನಿರೂಪಿಸಿದರು

ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಹಾಗೂ ಮಕ್ಕಳ ಕಲಿಕೆಗೆ ಪ್ರೋತ್ಸಾಹಧನ ನೀಡಲಾಯಿತು. ಬಳಿಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಉದ್ಯಮಿ ಹರೀಶ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ಸತ್ಯನಾರಾಯಣ ಪೂಜೆ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Edited By : Nagesh Gaonkar
Kshetra Samachara

Kshetra Samachara

26/01/2022 10:46 pm

Cinque Terre

11.67 K

Cinque Terre

1

ಸಂಬಂಧಿತ ಸುದ್ದಿ