ಮುಲ್ಕಿ: ಪಕ್ಷಿಕೆರೆ ಸಮಿಪದ ಪೇಜಾವರ ಮೂಲ ಮಠದಲ್ಲಿ ಶತಾಯುಷಿ ವೇದಮೂರ್ತಿ ಅಂಗಡಿ ಮಾರು ಕೃಷ್ಣ ಭಟ್ಟರಿಗೆ "ಶ್ರೀ ವಿಶ್ವೇಶತೀರ್ಥಾನುಗ್ರಹ" ಪ್ರಶಸ್ತಿ ಪ್ರಧಾನ ಮಾಡಲಾಯಿತು. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿ ಶತಾಯುಷಿ ಸಂಸ್ಕೃತ ಜ್ಯೋತಿಷಿ, ಪೌರೋಹಿತ್ಯ ವಿದ್ವಾಂಸರಾದ ಅಂಗಡಿಮಾರು ಕೆ. ಕೃಷ್ಣಭಟ್ಟರು ತಮ್ಮ ಬದುಕಿನ ಪ್ರತಿ ಹೆಜ್ಜೆಯಲ್ಲಿ ಪಾಠ ಕಲಿಸಿದವರು. ಕೃಷಿ ಬದುಕಿನಲ್ಲಿ ತಾವು ದುಡಿದು ಸಮಾಜಕ್ಕೆ ಹಂಚಿ ಸುಖ ಕಂಡವರು. ಜೀವನ ಪದ್ಧತಿಯನ್ನು ರೂಪಿಸಿದ ಕೃಷ್ಣಭಟ್ಟರು ಇಂದಿನ ಯುವಕರಿಗೆ ಮಾದರಿಯಾಗಿದ್ದು.ಅವರ 102ನೇ ಜನ್ಮದಿನದಂದು ಉಡುಪಿಯ ಶ್ರೀ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರ ದ್ವಿತೀಯ ಆರಾಧನೆಯ ಶುಭವಸರದಲ್ಲಿ "ಶ್ರೀ ವಿಶ್ವೇಶತೀರ್ಥಾನುಗ್ರಹ" ಪ್ರಶಸ್ತಿ ನೀಡಿ ಸಮ್ಮಾನಿಸಲಾಗಿದೆ ಎಂದರು.
ಈ ಸಂದರ್ಭ ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕಲ್ಕೂರ, ಉಪನ್ಯಾಸಕ ಸೋಂದಾ ಭಾಸ್ಕರ ಭಟ್, ವಿಶ್ವೇಶ್ ಭಟ್ ಪಕ್ಷಿಕೆರೆ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅಂಗಡಿ ಮಾರು ಕೃಷ್ಣಭಟ್ ಬರೆದ ಪಂಚಾಂಗವನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಬಿಡುಗಡೆ ಮಾಡಿದರು.
Kshetra Samachara
08/01/2022 01:15 pm