ಕಾರ್ಕಳ: ಮುಂದಿನ ರಾಜ್ಯೋತ್ಸವ ಸಂದರ್ಭದಲ್ಲಿ ಅರ್ಜಿಗಳನ್ನು ಸ್ವೀಕರಿಸದೆ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ಕುಮಾರ್ ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ತರಂಗ ಸಂಪಾದಕಿ ಡಾ ಯು.ಬಿ ರಾಜಲಕ್ಷ್ಮಿ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್‌ಗೆ ಕಾರ್ಕಳದ ಹೊಟೇಲ್ ಕಟೀಲ್ ಇಂಟರ್ ನ್ಯಾಶನಲ್ ಶಾಂಭವಿ ಫಾರ್ಮ್ ಹೌಸ್‌ನಲ್ಲಿ ನಡೆದ ಹುಟ್ಟೂರ ಪೌರ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿ ವಿತರಣೆಯ ಮರುದಿನ ಮಾಧ್ಯಮಗಳಲ್ಲಿ ಆಯ್ಕೆ ಕುರಿತು ಟೀಕೆಗಳು ಬರುತಿತ್ತು. ಈ ಬಾರಿ ಯಾವ ಪತ್ರಿಕೆಯೂ ಟೀಕೆ ಮಾಡಿಲ್ಲ. ತೆರೆಮರೆಯ ಸಾಧಕರನ್ನು ಗುರುತಿಸಿದ್ದೇವೆ. ಮುಂದಿನ ವರ್ಷ ಅರ್ಜಿ ಸ್ವೀಕರಿಸುವುದಿಲ್ಲ ಎಂದು ತೀರ್ಮಾನಕ್ಕೆ ಬಂದಿದ್ದು ಸಿ,ಎಂ ಕೂಡ ಅದಕ್ಕೆ ಒಪ್ಪಿಗೆ ನೀಡಿದ್ದಾಾರೆ. ಪ್ರಶಸ್ತಿಗೆ ಸಾಧಕರನ್ನು ಗುರುತಿಸಲು ವಿಶೇಷ ಸಮಿತಿ ರಚಿಸಿ ಆ ಸಮಿತಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚಾರ ಬೆಳೆಸಿ ತೆರೆಮರೆಯ ಸಾಧಕರನ್ನು ಗುರುತಿಸಲಿದೆ ಎಂದರು.
ಹಿರಿಯ ನ್ಯಾಯವಾದಿ. ಎಂ. ಕೆ. ವಿಜಯ ಕುಮಾರ್ ಕಾರ್ಯಕ್ರಮ ಉದ್ಘಾಾಟಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ. ಮೋಹನ ಆಳ್ವ ಅಭಿನಂದನ ಭಾಷಣ ನೆರವೇರಿಸಿದ ಮಾತನಾಡಿದರು.
Kshetra Samachara
13/12/2021 04:51 pm