ಮುಲ್ಕಿ: ಮುಲ್ಕಿ ಸಮೀಪದ ಪಂಚಮಹಲ್ ಶ್ರೀ ಸದಾಶಿವ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ವಿಜ್ರಂಭಣೆಯಿಂದ ನಡೆಯಿತು.
ಪ್ರಾತಃಕಾಲ ಪುಣ್ಯಾಹ, ಸಂಕಲ್ಪ, ದೇವತಾ ಪ್ರಾರ್ಥನೆ ನಡೆದು ವೇದಮೂರ್ತಿ ವಾದಿರಾಜ ಉಪಾಧ್ಯಾಯ ಹಾಗೂ ಅರ್ಚಕರಾದ ಶ್ರೀನಾಥ್ ಭಟ್ ನೇತೃತ್ವದಲ್ಲಿ ಶ್ರೀದೇವರಿಗೆ ಕ್ಷೀರಾಭಿಷೇಕ, ಬಿಲ್ವಾರ್ಚನೆ, ರುದ್ರಪಾರಾಯಣ ಸೇವೆಗಳು ನಡೆಯಿತು.
ಬಳಿಕ ಏಕಾದಶ ರುದ್ರಾಭಿಷೇಕ, ಕಲ್ಪೋಕ್ತ ಪೂಜೆ, ಕಲಶಾಭಿಷೇಕ ಮಧ್ಯಾಹ್ನ ಮಹಾ ಪೂಜೆ ಅನ್ನಸಂತರ್ಪಣೆ ನಡೆಯಿತು.
ಸಂಜೆ 7 ಗಂಟೆಗೆ ಭಜನಾ ಕಾರ್ಯಕ್ರಮಕ್ಕೆ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ದೀಪ ಬೆಳಗಿಸಿ ಚಾಲನೆ ನೀಡಿದರು.
ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.
ರಾತ್ರಿ ಎಂಟು ಗಂಟೆಗೆ ಪುಷ್ಪಾಲಂಕಾರ ಹೂವಿನ ಪೂಜೆ ಸೇವೆಗಳು ನಡೆದು ಬಳಿಕ ರಂಗಪೂಜೆ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ,ಉದ್ಯಮಿ ಅತುಲ್ ಕುಡ್ವ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಮಯ್ಯ, ಸಮಿತಿ ಸದಸ್ಯರಾದ ಕೆ ಸತೀಶ್ ಭಂಡಾರಿ, ರಾಮದಾಸ ಕಾಮತ್, ದೊಡ್ಡಣ್ಣ ಮೊಯ್ಲಿ, ಪುಷ್ಪರಾಜ್ ಆಚಾರ್ಯ, ತಾರಾನಾಥ ದೇವಾಡಿಗ, ಹರಿ ದೇವಾಡಿಗ ವಿನೋದ ದೇವಾಡಿಗ, ಶ್ಯಾಮಲಾ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
29/11/2021 07:38 pm