ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಪದ್ಮಶ್ರೀ ಹಾಜಬ್ಬನವರಿಗೆ ಕಿತ್ತಳೆ ಹಾರ ಹಾಕಿ ,ಬುಟ್ಟಿಯಲ್ಲಿ ಕಿತ್ತಳೆ ನೀಡಿ ಸನ್ಮಾನ!

ಉಡುಪಿ: ಸದಾ ವಿಭಿನ್ನ‌ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುವ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಇವತ್ತು ನಗರದಲ್ಲಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.ಪದ್ಮವಿಭೂಷಣ ಪ್ರಶಸ್ತಿ ಪಡೆದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪರವಾಗಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ ಮತ್ತು ಪದ್ಮಶ್ರೀ ಪ್ರಶಸ್ತಿ ವಿಜೇತ ಅಕ್ಷರ ಸಂತ ಹರೇಕಳ ಹಾಜಬ್ಬನವರಿಗೆ ಗೌರವ ಸನ್ಮಾನ ಮಾಡುವ ಕಾರ್ಯಕ್ರಮ ಇದಾಗಿತ್ತು.ಕಾರ್ಯಕ್ರಮದಲ್ಲಿ ಪದ್ಮಶ್ರೀ ಹಾಜಬ್ಬನವರಿಗೆ ಕಿತ್ತಳೆ ಹಣ್ಣಿನ ಹಾರ ಹಾಕಿ ,ಬುಟ್ಟಿಯಲ್ಲಿ ಕಿತ್ತಳೆ ನೀಡಿದ್ದು ಅರ್ಥಪೂರ್ಣವಾಗಿತ್ತು.

ಈ ಕಾರ್ಯಕ್ರಮವನ್ನು ಉಡುಪಿ ನಗರದ ಕಿದಿಯೂರ್ ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು.ಹಾಜಬ್ಬ ಅವರನ್ನು ಬೃಹತ್ ಗಾತ್ರದ ರಾಷ್ಟ್ರಧ್ವಜದ ಜೊತೆಗೆ ಚಂಡೆ ವಾದ್ಯದೊಂದಿಗೆ ವೇದಿಕೆಗೆ ಕರೆತರಲಾಯಿತು.

ವಿಶೇಷ ಆಕರ್ಷಣೆಯಾಗಿ ತುಳುನಾಡ ವಿಶೇಷ ಪೇಟ ಕೇದಗೆಮುಂದಲೆ- ಅಣಿ ಮಾದರಿ ಕಿರೀಟ ತೊಡಿಸಿ ಹಾಜಬ್ಬನವರನ್ನು ಸನ್ಮಾನಿಸಿ ಅವರಿಗೆ ಹೆಸರು ತಂದ ಕಿತ್ತಳೆ ಹಣ್ಣಿನ ಹಾರ ಹಾಕಿ ,ಬುಟ್ಟಿಯಲ್ಲಿ ಕಿತ್ತಳೆ ಹಣ್ಣು ಅರ್ಪಿಸಲಾಯಿತು.ಜಿಲ್ಲಾ ನಾಗರೀಕ ಸಮಿತಿ

ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಈ ಕಾರ್ಯಕ್ರಮದ ರೂವಾರಿಯಾಗಿದ್ದು ,ಗಣ್ಯರ ಸಮ್ಮುಖ ಈ ಕಾರ್ಯಕ್ರಮ ನಡೆಯಿತು.

Edited By : Shivu K
Kshetra Samachara

Kshetra Samachara

25/11/2021 02:54 pm

Cinque Terre

10.41 K

Cinque Terre

1

ಸಂಬಂಧಿತ ಸುದ್ದಿ