ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೆರ್ಡೂರು ಮೇಳದಿಂದ ಹೊರನಡೆದ ಪ್ರಸಿದ್ಧ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ

ಉಡುಪಿ: ಬಡಗುತಿಟ್ಟು ಯಕ್ಷಗಾನದ ಪ್ರಸಿದ್ಧ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ ಅವರು, ಪೆರ್ಡೂರು ಮೇಳದ ನಿಯಮಗಳಿಂದ ಬೇಸರಗೊಂಡು ಮೇಳಕ್ಕೆ ವಿದಾಯ ಹೇಳಿ ಹೊರ ನಡೆದಿದ್ದಾರೆ.

ರಾಘವೇಂದ್ರ ಆಚಾರ್ಯ ಅವರು, ಕಳೆದ ಕೆಲ ವರ್ಷಗಳಿಂದ ಬಡಗುತಿಟ್ಟುವಿನ ಪೆರ್ಡೂರು ಮೇಳದಲ್ಲಿ ಪ್ರಧಾನ ಭಾಗವತರಾಗಿ ಪ್ರಸಿದ್ಧ ಪಡೆದಿದ್ದರು.ಅಲ್ಲದೇ ಗಾನವೈಭವ, ತಾಳಮದ್ದಳೆಯಲ್ಲಿ ಹೆಚ್ಚಿನ ಬೇಡಿಕೆ ರಾಘವೇಂದ್ರ ಆಚಾರ್ಯ ಅವರಿಗಿತ್ತು. ಈ ಬಾರಿ ಪೆರ್ಡೂರು ಮೇಳದಲ್ಲಿ ಮುಂದುವರಿಯಲಿದ್ದಾರೆ ಎಂದು ಕರಪತ್ರ ಕೂಡ ಮುದ್ರಿತವಾಗಿತ್ತು.

ಆದರೆ ಪೆರ್ಡೂರು ಮೇಳದಲ್ಲಿ ಇರುವ ಕಲಾವಿದರು ಹಗಲಿನಲ್ಲಿ ಗಾನವೈಭವ, ತಾಳಮದ್ದಳೆಗೆ ಹೋಗುವಂತಿಲ್ಲ ಎಂದು ನಿರ್ಬಂಧಿಸಲಾಗಿದೆ. ಹೀಗಾಗಿ ಈ ನಿಯಮದಿಂದ ಬೇಸರಗೊಂಡ ಜನ್ಸಾಲೆ ರಾಘವೇಂದ್ರ ಆಚಾರ್ಯ ಅವರು ಮೇಳದಿಂದ ಹೊರ ನಡೆದಿದ್ದಾರೆ. ಪೆರ್ಡೂರು ಮೇಳದಲ್ಲಿ ಜನ್ಸಾಲೆ ಅವರ ಬದಲಾಗಿ ಹಿರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರು ಮೇಳಕ್ಕೆ ಸೇರ್ಪಡೆಗೊಂಡಿದ್ದಾರೆ.

Edited By :
Kshetra Samachara

Kshetra Samachara

24/11/2021 04:39 pm

Cinque Terre

9.69 K

Cinque Terre

1

ಸಂಬಂಧಿತ ಸುದ್ದಿ