ಮುಲ್ಕಿ: ಕಿನ್ನಿಗೋಳಿ ಸಮೀಪದ ಮೂರುಕಾವೇರಿ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ವಾರ್ಷಿಕ ಮಾರಿ ಪೂಜಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಮಂಗಳವಾರ ಪ್ರಾತಃಕಾಲ 3 ಗಂಟೆಗೆ ತೋರಣ ಮುಹೂರ್ತ ನಡೆಯಿತು. ಬೆಳಗ್ಗೆ 6 ಗಂಟೆಗೆ ಕಿನ್ನಿಗೋಳಿ ಮಹಮ್ಮಾಯಿ ಕಟ್ಟೆಯಲ್ಲಿ ಬಿಂಬ ಪ್ರತಿಷ್ಠೆ ಹಾಗೂ ದೇವಸ್ಥಾನದಲ್ಲಿ ಗಣಹೋಮ ನಡೆಯಿತು. ಮಧ್ಯಾಹ್ನ ಮಹಾಪೂಜೆ ಹಾಗೂ ದರ್ಶನ ಸೇವೆ, ಮಹಾ ಅನ್ನಸಂತರ್ಪಣೆ ನಡೆಯಿತು.
ಸಂಜೆ ಬಿಂಬ ಪ್ರತಿಷ್ಠೆಯ ಮಹಾಮ್ಮಾಯಿ ಕಟ್ಟೆ ಬಳಿ ಭಕ್ತವೃಂದದ ವತಿಯಿಂದ ಯಕ್ಷಗಾನ ಬಯಲಾಟ , ಕಲ್ಲುರ್ಟಿ ಪಂಜುರ್ಲಿ ದೈವಗಳ ಕೋಲ ನಡೆಯಿತು. ಬಳಿಕ ಕಿನ್ನಿಗೋಳಿಯ ಮಹಮ್ಮಾಯಿ ಕಟ್ಟೆಯಲ್ಲಿ ದರ್ಶನ ಸೇವೆ ನಡೆದು ದೇವಿಯ ಬಿಂಬವನ್ನು ಕಿನ್ನಿಗೋಳಿಯ ಕಟ್ಟೆಯಿಂದ ಮಹಮ್ಮಾಯಿ ದೇವಸ್ಥಾನದವರೆಗೆ ಮೆರವಣಿಗೆ ಮೂಲಕ ತರಲಾಯಿತು.
ಈ ಸಂದರ್ಭ ದೇವಸ್ಥಾನದಲ್ಲಿ ಶ್ರೀ ದುರ್ಗಾ ಭಜನಾ ಮಂಡಳಿ ನೇಕಾರ ಕಾಲೋನಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಅರಮನೆ ಪೂಜೆ ನಡೆದು ದೇವಿ ಹಾಗೂ ದೈವಗಳ ಭೇಟಿ , ರಾಶಿ ಪೂಜೆ ನಡೆಯಿತು. ಬುಧವಾರ ದರ್ಶನ ಸೇವೆ ವಿಸರ್ಜನಾ ಪೂಜೆ ಹಾಗೂ ದೇವಿಯ ಬಿಂಬ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
Kshetra Samachara
24/11/2021 07:32 am