ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕಾಲ್ನಡಿಗೆ ಹುಲಿವೇಷಧಾರಿ ಸಾಹಸಿ ಯುವಕನಿಗೆ ಸನ್ಮಾನ

ಉಡುಪಿ: ಬ್ರಹ್ಮಾವರದಿಂದ ಕಾಶ್ಮೀರದವರೆಗೆ 2800 ಕಿ.ಮೀ ಪ್ರಯಾಣವನ್ನು ಕಾಲ್ನಡಿಗೆಯಲ್ಲಿ 55 ದಿನದಲ್ಲಿ ತಲುಪಿ, ತುಳುನಾಡಿನ ಹೆಮ್ಮೆಯ ಕಲೆ ಹುಲಿವೇಷ ಧರಿಸಿ, ತುಳುನಾಡಿನ ಬಾವುಟ ಪ್ರದರ್ಶಿಸಿದ ಮುಂಡ್ಕಿನಜೆಡ್ಡುವಿನ ಸಾಹಸಿ ಯುವಕ ಹರ್ಷೇಂದ್ರನನ್ನು ಸನ್ಮಾನಿಸಲಾಯಿತು. ಉಡುಪಿಯ ಕುಂಜಿಬೆಟ್ಟಿವಿನ ಶ್ರೀಮತಿ ಶೈಲಾ ಅನಂತಕೃಷ್ಣ ದಂಪತಿ ಹಾಗೂ "ತಕ್ಷಕ್ ಮತ್ತು ಅಕ್ಷತ್" ಹುಲಿವೇಷ ತಂಡದ ವತಿಯಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಯುವಕನ ತಾಯಿ ಯಶೋದಾ ಆಚಾರ್ಯ, ಚೇರ್ಕಾಡಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರೇಖಾ ಎನ್ ಭಟ್ ಹಾಗೂ ರಾಧಾಕೃಷ್ಣ ಸಾಮಂತ್, ತಕ್ಷಕ್ ಪೈ, ಅಕ್ಷತ್ ಪೈ, ಧೀರಜ್ ಬನ್ನಂಜೆ, ನಾಸಿರ್ ನಿಟ್ಟೂರು, ಉದಯ ಪೂಜಾರಿ, ಧನುಷ್, ಶ್ರೀವರ,ಹರ್ಷಿತಾ ಮತ್ತಿತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

23/11/2021 12:08 pm

Cinque Terre

8.51 K

Cinque Terre

0

ಸಂಬಂಧಿತ ಸುದ್ದಿ