ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾಮೂಹಿಕ ಆಶ್ಲೇಷ ಬಲಿ ವೇದಮೂರ್ತಿ ಗೋಪಾಲಕೃಷ್ಣ ತಂತ್ರಿ ನೇತೃತ್ವದಲ್ಲಿ ವಿಜ್ರಂಭಣೆಯಿಂದ ನಡೆಯಿತು. ಪ್ರಾತಃಕಾಲ ಸುಬ್ರಮಣ್ಯ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ನಡೆದು ಆಶ್ಲೇಷ ಬಲಿ ಪೂಜೆ ಗೆ ಚಾಲನೆ ನೀಡಲಾಯಿತು.
ಮಧ್ಯಾಹ್ನ ದೇವಸ್ಥಾನದಲ್ಲಿ ಹಾಗೂ ನಾಗ ದೇವರಿಗೆ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆದು ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು. ಈ ಸಂದರ್ಭ ಗೋಪಾಲಕೃಷ್ಣ ತಂತ್ರಿಗಳು ಆಶೀರ್ವಚನ ನೀಡಿ ವರ್ಷಂಪ್ರತಿ ನಡೆಯುವಂತೆ ಸಾಮೂಹಿಕ ಆಶ್ಲೇಷ ಬಲಿ ವಿಜ್ರಂಭಣೆಯಿಂದ ನಡೆದಿದ್ದು ಲೋಕಕ್ಕೆ ಬಂದಿರುವ ಸರ್ವ ದುರಿತಗಳು ನಾಶವಾಗಲಿ ಹಾಗೂ ದೇವಸ್ಥಾನದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಷಷ್ಠಿ ಮಹೋತ್ಸವ ಹಾಗೂ ಜೀರ್ಣೋದ್ಧಾರದ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರಿಯಲಿ ಎಂದರು.
ಈ ಸಂದರ್ಭ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು, ಸದಸ್ಯರಾದ ಭುಜಂಗ ಶೆಟ್ಟಿ, ಮೋಹನದಾಸ್,ದೇವಳದ ಪ್ರಧಾನ ಅರ್ಚಕರಾದ ಮಧುಸೂದನ ಆಚಾರ್ಯ,ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಹರಿದಾಸ್ ಭಟ್, ಸಮಿತಿ ಸದಸ್ಯರಾದ ಟಿ.ಪುರುಷೋತ್ತಮ್ ರಾವ್, ಎಲ್. ಕೆ. ಸಾಲ್ಯಾನ್, ವಿಜಯಕುಮಾರ್ ರೈ, ಯೋಗೀಶ್ ಕೋಟ್ಯಾನ್, ವಿಪುಲ. ಡಿ. ಶೆಟ್ಟಿಗಾರ್, ಶಾರದಾ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
21/11/2021 04:50 pm