ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪಿ.ಎನ್. ಆಚಾರ್ಯ ವಿರಚಿತ ‘ತುಳು ಅಪ್ಪೆ’ ಭಾವಚಿತ್ರ ಅನಾವರಣ

ಉಡುಪಿ: ಕೊಡಂಕೂರು ಹಿತರಕ್ಷಣಾ ವೇದಿಕೆ ಹಾಗೂ ಶ್ರೀಸಾಯಿ ಬಾಬಾ ಮಂದಿರದ ಜಂಟಿ ಆಶ್ರಯದಲ್ಲಿ ಹಿರಿಯ ಕಲಾವಿದ ಪಿ.ಎನ್. ಆಚಾರ್ಯ ರಚಿಸಿದ ‘ತುಳು ಅಪ್ಪೆ’ ಭಾವಚಿತ್ರದ ಅನಾವರಣ ಕೊಡಂಕೂರು ಶ್ರೀಸಾಯಿಬಾಬಾ ಮಂದಿರ ಆವರಣದಲ್ಲಿ ಜರುಗಿತು.

'ತುಳು ಅಪ್ಪೆ' ಭಾವಚಿತ್ರ ಅನಾವರಣಗೊಳಿಸಿದ ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಇಡೀ ಜಗತ್ತಿನಲ್ಲಿಯೇ ತುಳು ಮಾತೆಯ ಭಾವಚಿತ್ರವನ್ನು ಮೊದಲ ಬಾರಿಗೆ ರಚಿಸಲಾಗಿದೆ. ಆದುದರಿಂದ ಇನ್ನು ತುಳು ಅಪ್ಪೆ ಭಾವಚಿತ್ರ ಬಳಸಿಕೊಳ್ಳಲು ಅವಕಾಶ ದೊರೆತಂತಾಗಿದೆ. ತುಳುವಿನಷ್ಟು ಸೌಂದರ್ಯದ ಭಾಷೆ ಇನ್ನೊಂದಿಲ್ಲ. ತುಳು ಸಂಸ್ಕೃತಿ ಶ್ರೀಮಂತ ಸಂಸ್ಕೃತಿಯಾಗಿದೆ ಎಂದರು.

ಕಲಾವಿದ ಪಿ.ಎನ್.ಆಚಾರ್ಯ ಮಾತನಾಡಿ, ತುಳು ಅಪ್ಪೆ ಭಾವಚಿತ್ರವನ್ನು ಎಲ್ಲರ ಅಭಿಪ್ರಾಯ ಪಡೆದು ರಚಿಸಲಾಗಿದೆ. ಮುಂದೆ ಇದರಲ್ಲಿ ಯಾವುದಾದರೂ ಬದಲಾವಣೆ ಇದ್ದರೆ ಅದನ್ನು ಮಾಡಲು ನಾವು ಸಿದ್ಧರಿದ್ದೇವೆ. ಒಂದೆಡೆ ಅರಬ್ಬಿ ಸಮುದ್ರ, ಇನ್ನೊಂದೆಡೆ ಪಶ್ಚಿಮಘಟ್ಟ, ತೆಂಗು ಅಡಿಕೆ, ಬಾಳೆ ಮತ್ತು ತುಳು ಜನತೆ ಸಾಮರಸ್ಯಕ್ಕೆ ಹೆಚ್ಚಿನ ಒತ್ತು ನೀಡಿರುವ ಹಿನ್ನೆಲೆಯಲ್ಲಿ ದೇವಸ್ಥಾನ, ಮಸೀದಿ, ಚರ್ಚ್‌ಗಳನ್ನು ಚಿತ್ರಿಸಲಾಗಿದೆ ಎಂದರು.

ಈ ಸಂದರ್ಭ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅವರನ್ನು ಸನ್ಮಾನಿಸಲಾಯಿತು.

Edited By : Nagesh Gaonkar
Kshetra Samachara

Kshetra Samachara

11/11/2021 09:30 pm

Cinque Terre

5.96 K

Cinque Terre

0

ಸಂಬಂಧಿತ ಸುದ್ದಿ