ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ "ಹುಲಿ" ಗಳ ಅಬ್ಬರ; ಮಿಂಚಿನ ನೆಗೆತ, ತಾಕತ್ತು ಪ್ರದರ್ಶನ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಾನಾ ತಂಡಗಳಿಂದ 'ಪ್ರ'ಚಂಡ ಹುಲಿ ವೇಷ ನರ್ತನ ಸೇವೆ ದೇವಸ್ಥಾನದ ಪ್ರಾಂಗಣದಲ್ಲಿ ಶುಕ್ರವಾರ ಜರುಗಿತು.

ಈ ಸಂದರ್ಭ ಹುಲಿ ವೇಷ ತಂಡಗಳು ತಮ್ಮೊಳಗೆ ಜಿದ್ದಿಗೆ ಬಿದ್ದವರಂತೆ ತಮ್ಮ ಕಸರತ್ತು, ತಾಕತ್ತಿನ ಪ್ರದರ್ಶನ ತೋರಿ, ಜನಮನ ರಂಜಿಸಿದರು. ಎತ್ತರದಿಂದ ಪಲ್ಟಿಯಾಗಿ ಹಾರುವುದು, ಕಾಡಿನ ಹುಲಿ- ಚಿರತೆಯಂತಹ ಮಿಂಚಿನ ನೆಗೆತ, ಅಕ್ಕಿ ಮುಡಿಯನ್ನು ಬಾಯಲ್ಲಿ ಕಚ್ಚಿ ಎಸೆಯುವುದು, ಮರಗಾಲು ಕುಣಿತದ ಸೊಬಗು ಇತ್ಯಾದಿ ಅಪಾಯಕಾರಿ ಆಟಗಳ ಅನಾವರಣ, ಬಲಾಬಲ ದರ್ಶನ ನೋಡುಗರನ್ನು ಮುದಗೊಳಿಸಿತು.

"ಹುಲಿ" ಗಳ ಹೆಜ್ಜೆ ಕುಣಿತಕ್ಕೆ ತಕ್ಕಂತೆ ತಾಸೆ, ವಾದ್ಯ, ಚೆಂಡೆ ಕಲಾವಿದರ ನೈಪುಣ್ಯ, ಪ್ರತಿಭಾ ಸಾಮರ್ಥ್ಯವೂ ನೆರೆದ ಭಾರಿ ಪ್ರೇಕ್ಷಕ ಗಡಣದ ಚಪ್ಪಾಳೆ, ಪ್ರಶಂಸೆಗೆ ಪಾತ್ರವಾಯಿತು.

Edited By : Manjunath H D
Kshetra Samachara

Kshetra Samachara

16/10/2021 10:29 am

Cinque Terre

12.74 K

Cinque Terre

1

ಸಂಬಂಧಿತ ಸುದ್ದಿ