ಒಬ್ಬ ವ್ಯಕ್ತಿ ಹುಟ್ಟುವುದಕ್ಕೂ ಮೊದಲು ಮತ್ತು ಸತ್ತ ನಂತರವು ಕಾನೂನು ಆತನ ಜೊತೆ ಇರುತ್ತದೆ. ಅಂದರೆ ಕಾನೂನು ಗರ್ಭದಿಂದ ಗೋರಿಯ ತನಕ ಇರುತ್ತದೆ ಎಂದು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಹಾಗು ಪುತ್ತೂರು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ರಮೇಶ್ ಎಮ್ ಅವರು ಹೇಳಿದರು.
ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಪುತ್ತೂರು ರಾಜ್ಯ ಅಬಕಾರಿ ಇಲಾಖೆ ಪುತ್ತೂರು ಮತ್ತು ನವೋಯದ ಯುವಕ ಮತ್ತು ಮಹಿಳಾ ವೃಂದದ ಅಶ್ರಯದಲ್ಲಿ ಅಕ್ಟೋಬರ್ 11 ರಂದು ನಡೆದ ಕಾನೂನು ಅರಿವು, ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಂಘದ ಸದಸ್ಯರಾಗಿದ್ದು ಅಬಕಾರಿ ಇಲಾಖೆಯ ಉಪನಿರೀಕ್ಷಕ ಅಂಗಾರ ಪಿ ಮತ್ತು ಸಿಬ್ಬಂದಿ ಪ್ರೇಮಾನಂದ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
Kshetra Samachara
11/10/2021 04:56 pm