ಮಂಗಳೂರು: ಯಾವುದೇ ವಿದ್ಯೆಯನ್ನು ಕಲಿಯುವುದು ಮುಖ್ಯವಲ್ಲ. ಅದನ್ನು ಸದ್ವಿನಿಯೋಗ ಮಾಡೋದು ಮುಖ್ಯ. ಹಾಗಾಗಿ ಪೊಲೀಸ್ ಸಿಬ್ಬಂದಿ ಕಾರ್ಯಾಗಾರದಲ್ಲಿ ಕಲಿತ ತುಳು, ಬ್ಯಾರಿ ಭಾಷೆಯನ್ನು ಕರ್ತವ್ಯ ನಿರ್ವಹಿಸುವ ಸಂದರ್ಭ ಬಳಸಬೇಕಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಹೇಳಿದರು.
ನಗರದ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆದ ತುಳು- ಬ್ಯಾರಿ ಭಾಷಾ ಕಲಿಕಾ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ತುಳು ಲಿಪಿಯನ್ನು ಮನಸ್ಸಿಟ್ಟು ಕಲಿತರೆ 18 ದಿನಗಳಲ್ಲಿ ಕಲಿಯಲು ಸಾಧ್ಯ. ಮಲಯಾಳಿಗರು ತುಳುಲಿಪಿಯನ್ನು ತಮ್ಮದೇ ಲಿಪಿಯನ್ನಾಗಿ ಮಾಡಿ ಬಳಸುತ್ತಿದ್ದಾರೆ. ಅವರಿಗೆ ಸಾವಿರ ವಂದನೆಗಳು ಎಂದು ಹೇಳಿದರು.
ಈ ಸಂದರ್ಭ ತುಳು, ಬ್ಯಾರಿ ಲಿಪಿಯನ್ನು ಕಲಿಸಿಕೊಟ್ಟ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಲಾಯಿತು. ಭಾಷೆ ಕಲಿತ ಶಿಬಿರಾರ್ಥಿ ಪೊಲೀಸ್ ಸಿಬ್ಬಂದಿಗೆ ಸರ್ಟಿಫಿಕೇಟ್ ನೀಡಲಾಯಿತು. ತುಳು ಭಾಷಾ ಕಾರ್ಯಾಗಾರದಲ್ಲಿ ಪೊಲೀಸ್ ಸಿಬ್ಬಂದಿ ತುಳು ಭಾಷೆಯಲ್ಲಿ ಮಾತನಾಡಿದರು.
Kshetra Samachara
21/09/2021 05:02 pm