ಮುಲ್ಕಿ:ಮುಲ್ಕಿ ಪರಿಸರದಲ್ಲಿ ಭಾನುವಾರ ಅನಂತ ಚತುರ್ದಶಿ ಸಂಭ್ರಮದಿಂದ ಸರಳ ರೀತಿಯಲ್ಲಿ ನಡೆದಿದೆ. ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ ವಿಶೇಷ ಪ್ರಾರ್ಥನೆ ನಡೆದು ಶ್ರೀ ದೇವರನ್ನು ಪಲ್ಲಕ್ಕಿ ಮೂಲಕ ವಿವಿಧ ಬಿರುದಾವಳಿಗಳೊಂದಿಗೆ ಪೇಟೆ ಸವಾರಿ ನಡೆದು ಶಾಂಭವಿ ನದಿಯಲ್ಲಿ ನದಿ ಸ್ನಾನ ನಡೆಯಿತು.
ನದಿ ಸ್ನಾನದ ಬಳಿಕ ಶ್ರೀ ದೇವರಿಗೆ ವಿಶೇಷ ಪೂಜೆ ನಡೆಯಿತು. ಈ ಸಂದರ್ಭ ದೇವಸ್ಥಾನದ ಅರ್ಚಕ ಪದ್ಮನಾಭ ಭಟ್ ಅನಂತ ಚತುರ್ದಶಿ ವೃತ್ತದ ಮಹತ್ವ ಗಳನ್ನು ತಿಳಿಸಿ ಈ ಬಾರಿ ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸರಳ ರೀತಿಯಲ್ಲಿ ಅನಂತ ಚತುರ್ದಶಿ ಆಚರಣೆ ನಡೆದಿದ್ದು ಲೋಕಕ್ಕೆ ಬಂದಿರುವ ಕೊರೊನಾ ಮಹಾಮಾರಿ ದೂರವಾಗಿ ಶಾಂತಿ ನೆಲಸಲಿ ಎಂದರು.
ಪರ್ಯಾಯ ಅರ್ಚಕ ವೆಂಕಟೇಶ ಭಟ್, ವೇದಮೂರ್ತಿ ರಾಜೇಶ ಭಟ್, ಸತೀಶ್ ಭಂಡಾರಿ, ಪಾಂಡುರಂಗ ಭಟ್, ದೇವಣ್ಣ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಅನಂತ ಚತುರ್ದಶಿ ಪ್ರಯುಕ್ತ ಶ್ರೀ ವೆಂಕಟರಮಣ ದೇವಸ್ಥಾನವನ್ನು ತರಕಾರಿಗಳಿಂದ ವಿಶೇಷ ರೀತಿಯಲ್ಲಿ ಸಿಂಗರಿಸಲಾಗಿದ್ದು ಭಕ್ತಾದಿಗಳನ್ನು ಆಕರ್ಷಿಸುತ್ತಿದೆ.
Kshetra Samachara
19/09/2021 03:32 pm