ಮಂಗಳೂರು: ಉದಯೋನ್ಮುಖ ಬರಹಗಾರ, ಪತ್ರಕರ್ತ ಧೀರಜ್ ಪೊಯ್ಯೆಕಂಡ ಅವರ ಎರಡನೇ ಕಾದಂಬರಿ 'ಪರಾಶರ' ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಅನಾವರಣಗೊಂಡಿತು.
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಳದ ಕೋಶಾಧಿಕಾರಿ ಪದ್ಮರಾಜ್ ಆರ್. ಕೃತಿಯನ್ನು ಅನಾವರಣಗೊಳಿಸಿದರು.
ಮೈ ಅಂತರಾತ್ಮ ಸಂಸ್ಥಾಪಕ ವೇಣುಶರ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಸಮಾಜಕ್ಕೆ ಅನ್ವಯವಾಗುವಂತೆ ಕಾದಂಬರಿಯ ವಸ್ತುವಿದ್ದು, ಎರಡು ಮಾರ್ಗದಲ್ಲಿ ಕತೆ ಮುಂದುವರಿಯುತ್ತದೆ. ಇಂದು ಸಾಹಿತ್ಯ ಸೃಷ್ಟಿಯ ಜೊತೆಗೆ ಓದುಗರನ್ನು ಹೆಚ್ಚಿಸುವುದು ಈ ಕಾಲದ ಅಗತ್ಯವಾಗಿದೆ ಎಂದು ಹೇಳಿದರು.
ಕಾದಂಬರಿಗಾರ ಧೀರಜ್ ಪೊಯ್ಯೆಕಂಡ ಮಾತನಾಡಿ, ಸೋಶಿಯಲ್ ಮೀಡಿಯಾಗಳ ದುರ್ಬಳಕೆ ಹಾಗೂ ಅದರಿಂದಾಗುವ ದುಷ್ಪರಿಣಾಮಗಳ ಎಳೆಯನ್ನಿಟ್ಟುಕೊಂಡು 'ಪರಾಶರ' ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಕಾದಂಬರಿಯನ್ನು ಹೆಣೆಯಲಾಗಿದೆ. ಅಲ್ಲದೆ ಪ್ರಸ್ತುತ ಕಾಲಘಟ್ಟದಲ್ಲಿ ಸಮಾಜದಲ್ಲಿ ಕಾಣಸಿಗುವ ಚಂಚಲಸ್ವಭಾವದ ಮಾನವ ಸಂಬಂಧಗಳು, ಸ್ನೇಹ ಹಾಗೂ ಪ್ರೀತಿಯ ವಿವಿಧ ಆಯಾಮಗಳು ಈ ಕಾದಂಬರಿಯಲ್ಲಿ ಚರ್ಚಿಸಲಾಗುತ್ತದೆ ಎಂದು ಹೇಳಿದರು.
Kshetra Samachara
26/08/2021 05:26 pm