ಕಾಪು : ಜನಸಂಪರ್ಕ ಜನ ಸೇವಾ ವೇದಿಕೆ ಕಳತ್ತೂರು-ಕಾಪು ಇವರ ಆಶ್ರಯದಲ್ಲಿ ಕೊರೋನಾ ವಾರಿಯರ್ಸ್ಗಳ ನೆಲೆಯಲ್ಲಿ ಕಾಪು ಅಂಚೆ ಕಚೇರಿಯ ಅಂಚೆ ಪಾಲಕರು ಹಾಗೂ ಎಲ್ಲಾ ಸಿಬ್ಬಂದಿಗಳನ್ನು ಕಾಪು ಪ್ರಧಾನ ಅಂಚೆ ಕಛೇರಿಯಲ್ಲಿ ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಅಂಚೆ ವಿಭಾಗದ ಅಂಚೆ ಅಧಿ ಕ್ಷಕ ನವೀನ್‌ಚಂದರ್ ಮಾತನಾಡಿ, ಕೊರೊನಾ ಸಂದರ್ಭದಲ್ಲಿದಣಿವರಿಯದ ಸೇವೆ ಸಲ್ಲಿಸಿದ ಅಂಚೆ ಇಲಾಖೆಯ ಸಿಬಂದಿಗಳನ್ನು ಸಮ್ಮಾನಿಸಿರುವುದು ಇದೇ ಪ್ರಥಮವಾಗಿದೆ. ಕೊರೊನಾ ವಾರಿಯರ್‌ಗಳಾದ ಅಂಚೆ ಸಿಬಂದಿಗಳನ್ನು ಸಮ್ಮಾನಿಸುವ ಮೂಲಕ ಅಂಚೆ ಇಲಾಖೆಯ ಸೇವೆಯನ್ನು ಹತ್ತಿರದಿಂದ ಗುರುತಿಸಿದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಪು - ಕಳತ್ತೂರು ಸಮಾಜ ಸೇವಾ ವೇದಿಕೆಯ ಅಧ್ಯಕ್ಷ ಮೊಹಮ್ಮದ್ ಫಾರೂಕ್ ಚಂದ್ರನಗರ, ಶೇಖರ ಬಿ. ಶೆಟ್ಟಿ ಕಳತ್ತೂರು, ರಾಕೇಶ್ ಕುಂಜೂರು, ದಿವಾಕರ. ಡಿ. ಶೆಟ್ಟಿ ದಿವಾಕರ ಬಿ. ಶೆಟ್ಟಿ, ದಯಾನಂದ ಶೆಟ್ಟಿ,ರಾಜೇಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
02/08/2021 04:09 pm