ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹಿರಿಯ ಸಂಗೀತ ಗುರು ,ನಾದ ವೈಭವಂ ವಾಸುದೇವ ಭಟ್ ಅವರಿಗೆ ಗೌರವ

ಉಡುಪಿ: 'ಸಾಧಕರೊಂದಿಗೆ ನಾವು ' ಕಾರ್ಯಕ್ರಮದಡಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ವತಿಯಿಂದ ಉಡುಪಿಯ ಹಿರಿಯ ಸಂಗೀತ ಗುರು, ಪ್ರಾಧ್ಯಾಪಕ, ಪತ್ರಕರ್ತ, ನಿರ್ದೇಶಕ , ಉಡುಪಿ ನಾದ ವೈಭವಂ ವಾಸುದೇವ ಭಟ್ ಅವರನ್ನು ಇಂದ್ರಾಳಿಯಲ್ಲಿರುವ ಅವರ ಸ್ವಗೃಹದಲ್ಲಿ ಗೌರವಿಸಲಾಯಿತು. 10 ಸಾವಿರ ಗೌರವಧನದೊಂದಿಗೆ ಸ್ಮರಣಿಕೆ ನೀಡಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ್ ಶೆಣೈ ಅವರು ಗೌರವಿಸಿದರು.

ಈ ಸಂದರ್ಭದಲ್ಲಿ ಪೂರ್ಣಿಮ ಜನಾರ್ಧನ್ ಸ್ವಾಗತಿಸಿ ಪರಿಚಯಿಸಿದರು. ಪ್ರತಿಷ್ಠಾನದ ಉಪಾಧ್ಯಕ್ಷೆ ಸಂಧ್ಯಾ ಶೆಣೈ, ಪತ್ರಕರ್ತ ಶೇಖರ ಅಜೆಕಾರು ಅಭಿನಂದನಾ ಮಾತುಗಳನ್ನಾಡಿದರು .ವಾಸುದೇವ ಭಟ್ ಅವರ ಪತ್ನಿ ಸುನಂದಾ, ಮಗಳು ಶುಭಾ ಬಾಸ್ರಿ, ಸುದರ್ಶನ್ ದೇವಾಡಿಗ, ಪ್ರಶಾಂತ್ ಕಾಮತ್ ಪತ್ರಕರ್ತ ನರಸಿಂಹಮೂರ್ತಿ, ಸಂಚಾಲಕ ರವಿರಾಜ್ ಎಚ್.ಪಿ ಮೊದಲಾದವರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

28/07/2021 05:10 pm

Cinque Terre

4.02 K

Cinque Terre

0

ಸಂಬಂಧಿತ ಸುದ್ದಿ