ಮುಲ್ಕಿ: ಮುಲ್ಕಿ ಸೀಮೆಯ ಬೆಳ್ಳಾಯರು ಗ್ರಾಮದ ಕೊಲ್ನಾಡು ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಶನಿವಾರ ರಾತ್ರಿ ನೇಮೋತ್ಸವ ನಡೆಯಿತು.
ಶನಿವಾರ ಬೆಳಗ್ಗೆ ಧ್ವಜಸ್ತಂಭ ಮುಹೂರ್ತ ನಡೆದು ಸಂಜೆ 3 ಗಂಟೆಗೆ ಚಪ್ಪರ ಏರುವುದರ ಮುಖಾಂತರ ರಾತ್ರಿ ದೈವದ ಭಂಡಾರ ಹೊರಟು ನೇಮೋತ್ಸವ ಸಂಭ್ರಮದಿಂದ ಜರುಗಿತು.
ಈ ಸಂದರ್ಭ ಕೊಲ್ನಾಡುಗುತ್ತು ಕೆ.ಕಿರಣ್ ಕುಮಾರ್ ಶೆಟ್ಟಿ ಮಾತನಾಡಿ, ಶ್ರೀ ಕೋರ್ದಬ್ಬು ಸೇವಾ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಯುವಕರ ಸಂಘಟನೆಯಿಂದ ನೇಮೋತ್ಸವ ಸರಳ ರೀತಿಯಲ್ಲಿ ನಡೆದಿದೆ ಎಂದರು.
ಶ್ರೀ ಕೋರ್ದಬ್ಬು ಸೇವಾ ಸಮಿತಿ ಅಧ್ಯಕ್ಷ ಜೈ ಕೃಷ್ಣಶೆಟ್ಟಿ ಕಲ್ಲಿಮಾರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಫ್ರೆಂಡ್ಸ್ ಕ್ಲಬ್ ಕೊಲ್ನಾಡು ಅವರಿಂದ ಅನ್ನ ಸಂತರ್ಪಣೆ ನಡೆಯಿತು.
Kshetra Samachara
28/02/2021 10:18 am