ಮುಲ್ಕಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಮುಲ್ಕಿ ಸಮೀಪದ ಹೆಜಮಾಡಿ ಬಳಿಯ ಇತಿಹಾಸ ಪ್ರಸಿದ್ಧ ನಡಿಕುದ್ರು ಧರ್ಮದೈವ ಶ್ರೀ ಜಾರಂದಾಯ ದೈವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ಜಾರಂದಾಯ ಸೇವಾ ಯುವಕ ವೃಂದ 43ನೇ ಭಜನಾ ಮಂಗಲೋತ್ಸವ
ನಡೆಯಿತು.
ಶನಿವಾರ ಬೆಳಗ್ಗೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಅರ್ಚಕ ಬಿ.ಕೃಷ್ಣದಾಸ್ ಭಟ್ ಉಪಸ್ಥಿತಿಯಲ್ಲಿ ವೇದಮೂರ್ತಿ ವಾದಿರಾಜ ಉಪಾಧ್ಯಾಯ ನೇತೃತ್ವದಲ್ಲಿ ಬ್ರಹ್ಮಕಲಶಾಭಿಷೇಕ ನಡೆಯಿತು.
ಬಳಿಕ ಪಂಚಕಜ್ಜಾಯ ಸೇವೆ ಹಾಗೂ ದೈವ ದರ್ಶನ ನಡೆಯಿತು. ಸೂರ್ಯಾಸ್ತದಿಂದ ಮರುದಿನ ಸೂರ್ಯೋದಯದವರೆಗೆ ವಿವಿಧ ಭಜನಾ ಮಂಡಳಿಯವರಿಂದ 43ನೇ ವಾರ್ಷಿಕ ಮಂಗಲೋತ್ಸವ ಭಜನಾಮೃತ ನಡೆಯಿತು.
ಈ ಸಂದರ್ಭ ವೇದಮೂರ್ತಿ ಕೊಲಕಾಡಿ ವಾದಿರಾಜ ಉಪಾಧ್ಯಾಯ ಮಾತನಾಡಿ ದೈವ-ದೇವರುಗಳ ಆರಾಧನೆಯಿಂದ ಸುಖಶಾಂತಿ- ನೆಮ್ಮದಿ ಹಾಗೂ ಲೋಕಕಲ್ಯಾಣ ಸಾಧ್ಯ ಎಂದರು.
ನಡಿಕುದ್ರು ಧರ್ಮದೈವ ಶ್ರೀ ಜಾರಂದಾಯ ದೈವಸ್ಥಾನ ಸಮಿತಿಯ ಅಧ್ಯಕ್ಷ ಹರಿಶ್ಚಂದ್ರ ಕೋಟ್ಯಾನ್ ಮಾತನಾಡಿ, ಫೆ. 24ರಂದು ಬೆಳಿಗ್ಗೆ ನಾಗ ದೇವರಿಗೆ ಹಾಲು ಅಭಿಷೇಕ, ಮಧ್ಯಾಹ್ನ ವಿದ್ಯಾರ್ಥಿ ವೇತನ ವಿತರಣೆ, ಬಳಿಕ ಮಹಾ ಅನ್ನ ಸಂತರ್ಪಣೆ, ರಾತ್ರಿ 7ಕ್ಕೆ ಭಂಡಾರ ಇಳಿಯುವಿಕೆ, 9 ಗಂಟೆಗೆ ಮೈಸಂದಾಯ ನೇಮ, 10ಕ್ಕೆ ಧರ್ಮದೈವ ಜಾರಂದಾಯ ಬಂಟ ಪರಿವಾರ ದೈವಗಳ ಅಂಗಣ ನೇಮೋತ್ಸವ ನಡೆಯಲಿದೆ ಎಂದರು.
Kshetra Samachara
20/02/2021 06:35 pm