ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಐಕಳ ಕಾಂತಾಬಾರೆ- ಬೂದಾಬಾರೆ ಕಂಬಳೋತ್ಸವ ಸಮಾಪನ; ಬಹುಮಾನ ವಿತರಣೆ

ಮುಲ್ಕಿ: ಕಿನ್ನಿಗೋಳಿ ಸಮೀಪದ ಇತಿಹಾಸ ಪ್ರಸಿದ್ಧ ಐಕಳ ಕಾಂತಾಬಾರೆ- ಬೂದಾಬಾರೆ ಕಂಬಳ ಸಮಾಪನಗೊಂಡಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಂಬಳ ಸಮಿತಿ ಅಧ್ಯಕ್ಷ ಡಾ.ಬೆಳಪು ದೇವಿಪ್ರಸಾದ್ ಶೆಟ್ಟಿ ವಹಿಸಿ ಮಾತನಾಡಿ, ಐಕಳ ಕಾಂತಾಬಾರೆ-ಬೂದಾಬಾರೆ ಕಂಬಳ ನಡೆಸಲು ಸಹಕಾರ ನೀಡಿದ ಎಲ್ಲ ಅಧಿಕಾರಿಗಳಿಗೆ , ಗ್ರಾಮಸ್ಥರಿಗೆ ಧನ್ಯವಾದ ಅರ್ಪಿಸಿದರು. ಮುಂಬರುವ ದಿನಗಳಲ್ಲಿ ಗ್ರಾಮವನ್ನು ಅಭಿವೃದ್ಧಿಪಡಿಸಲು ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಕಂಬಳ ಸಮಿತಿ ಪದಾಧಿಕಾರಿಗಳಾದ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಚಿತ್ತರಂಜನ್ ಭಂಡಾರಿ, ಕೃಷ್ಣ ಮಾರ್ಲ ಹಿರಿಮನೆ, ಯೋಗೀಶ್ ರಾವ್, ಸಾಯಿನಾಥ ಶೆಟ್ಟಿ, ತಾರಾನಾಥ ಶೆಟ್ಟಿ, ಮುರಳಿದರ ಶೆಟ್ಟಿ ಐಕಳ, ಶ್ರೀಶ ಸರಾಫ್ , ದಯೇಶ್, ಶರತ್ ಶೆಟ್ಟಿ, ಮುಂಬೈ ಸಮಿತಿಯ ಕುಶಾಲ್ ಭಂಡಾರಿ, ಶಶಿಧರ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

* ಕಂಬಳ ಓಟ ಮಾಹಿತಿ- ಫಲಿತಾಂಶ ವಿವರ:

ಕನೆಹಲಗೆ: 5 ಜೊತೆ, ಅಡ್ಡಹಲಗೆ: 7 ಜೊತೆ, ಹಗ್ಗ ಹಿರಿಯ: 17 ಜೊತೆ,

ನೇಗಿಲು ಹಿರಿಯ: 23 ಜೊತೆ,

ಹಗ್ಗ ಕಿರಿಯ: 22 ಜೊತೆ,

ನೇಗಿಲು ಕಿರಿಯ: 101 ಜೊತೆ,

ಒಟ್ಟು ಕೋಣಗಳ ಸಂಖ್ಯೆ : 175 ಜೊತೆ.

*ಕನೆಹಲಗೆ: ವಾಮಂಜೂರು ತಿರುವೈಲುಗುತ್ತು ಅಭಯ್ ನವೀನ್ ಚಂದ್ರ ಆಳ್ವ.

ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ

(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ). ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ ಭಟ್.

ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ

(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ).

* ಅಡ್ಡ ಹಲಗೆ: ಪ್ರಥಮ- ಬೋಳಾರ ತ್ರಿಶಾಲ್ ಕೆ.ಪೂಜಾರಿ,

ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ಕೃಷ್ಣ ನಾಯ್ಕ್.

ದ್ವಿತೀಯ: ಆಲದಪದವು ಮೇಗಿನಮನೆ ಅಜ್ಜಾಡಿ ಬಾಬು ರಾಜೇಂದ್ರ ಶೆಟ್ಟಿ.

ಹಲಗೆ ಮುಟ್ಟಿದವರು: ಬಂಗಾಡಿ ಕುದ್ಮನ್ ಲೋಕಯ್ಯ ಗೌಡ್ರು.

* ಹಗ್ಗ ಹಿರಿಯ: ಪ್ರಥಮ- ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ "A".

ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ.

ದ್ವಿತೀಯ: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ "B".

ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ.

* ಹಗ್ಗ ಕಿರಿಯ: ಪ್ರಥಮ- ಮೂಡುಬಿದಿರೆ ನಿವ್ ಪಡಿವಾಲ್ಸ್ ಹಾರ್ದಿಕ್ ಹರ್ಷವರ್ಧನ ಪಡಿವಾಳ್ಸ್.

ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ.

ದ್ವಿತೀಯ: ಜಪ್ಪು ಮನ್ಕುತೋಟಗುತ್ತು ಸಾಚಿ ಅನಿಲ್ ಶೆಟ್ಟಿ.

ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್.

* ನೇಗಿಲು ಹಿರಿಯ: ಪ್ರಥಮ- ಕೌಡೂರು ಬೀಡು ತುಷಾರ್ ಮಾರಪ್ಪ ಭಂಡಾರಿ "B".

ಓಡಿಸಿದವರು: ಬಾರಾಡಿ ಸತೀಶ್.

ದ್ವಿತೀಯ: ಇರುವೈಲು ಪಾನಿಲ ಬಾಡ ಪೂಜಾರಿ "A".

ಓಡಿಸಿದವರು: ಬೈಂದೂರು ವಿವೇಕ್.

* ನೇಗಿಲು ಕಿರಿಯ: ಪ್ರಥಮ- ಕಾಂತಾವರ ಬಾಂದೊಟ್ಟು ನಿಖಿಲ್ ಮೋಕ್ಷಿತ್ ಕುಮಾರ್.

ಓಡಿಸಿದವರು: ಮರೋಡಿ ಶ್ರೀಧರ್.

ದ್ವಿತೀಯ: ಕಾರಿಂಜ ಕೊಂಬೆಲ್ ಗುತ್ತು ಪ್ರಶಾಂತ್ ಪೂಜಾರಿ "A".

ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್.

Edited By : Manjunath H D
Kshetra Samachara

Kshetra Samachara

07/02/2021 07:35 pm

Cinque Terre

24.05 K

Cinque Terre

0

ಸಂಬಂಧಿತ ಸುದ್ದಿ