ಮುಲ್ಕಿ: ಇಲ್ಲಿಗೆ ಸಮೀಪದ ಅತಿಕಾರಿಬೆಟ್ಟು ಪಾದೆ ಗಡುಪಾಡು ನೇಮೋತ್ಸವ ಶನಿವಾರ ರಾತ್ರಿ ನಡೆಯಿತು.
ಶನಿವಾರ ಸಂಜೆ ಅತಿಕಾರಿಬೆಟ್ಟು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದಿಂದ ಗಡುಪಾಡಿಗೆ ಭಂಡಾರ ಬಂದು ಗಗ್ಗರ ಕಟ್ಟುವ ಮುಖಾಂತರ ನೇಮೋತ್ಸವಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭ ಮಟ್ಟು ಕೋರ್ದಬ್ಬು ಮತ್ತು ನಡಿಬೆಟ್ಟು ಜುಮಾದಿ, ಬಂಟ ದೈವಗಳ ಭೇಟಿ ನಡೆಯಿತು. ಬಳಿಕ ಭಂಡಾರ ನಿರ್ಗಮನವಾಗಿ ನೇಮೋತ್ಸವ ಸಂಪನ್ನಗೊಂಡಿತು.
ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಆಡಳಿತ ಮೊಕ್ತೇಸರ ಗುತ್ತಿನಾರ್ ಜಯರಾಮ್ ಶೆಟ್ಟಿ ಮಾತನಾಡಿ, ಅನಾದಿಕಾಲದಿಂದಲೂ ಕಾಲಾವಧಿ ನೇಮೋತ್ಸವ ನಡೆಯುತ್ತಾ ಬಂದಿದ್ದು, ಈ ಬಾರಿ ಕೊರೊನಾದಿಂದಾಗಿ ಸರಳ ರೀತಿಯಲ್ಲಿ ನಡೆದಿದೆ ಎಂದರು.
ರಾಮದಾಸ ಶೆಟ್ಟಿ ಬಾಳಿಕೆಮನೆ, ಗಂಗಾಧರ ಶೆಟ್ಟಿ ಬರ್ಕೆ ತೋಟ, ವಿವೇಕಾನಂದ ಶೆಟ್ಟಿ , ಕುಟ್ಟಿ ಪಂಬದ,ಮುಲ್ಕಿ ವಿಜಯಾ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ, ಅತಿಕಾರಿಬೆಟ್ಟುಗ್ರಾ.ಪಂ. ಸದಸ್ಯ ದಯಾನಂದ ಮಟ್ಟು, ಮಾಜಿ ಉಪಾಧ್ಯಕ್ಷ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಉತ್ತಮ್ ಮೈಲೊಟ್ಟು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
31/01/2021 10:40 am