ಮಂಗಳೂರು: ಫಲ್ಗುಣಿ ನದಿಯ ತಟದಲ್ಲಿರುವ ಬೋಳೂರಿನ ಶ್ರೀ ವಿಷ್ಣು ವಿಠೋಭ ಭಜನಾ ಮಂದಿರದ 44ನೇ ವಾರ್ಷಿಕ ಏಕಾಹ ಭಜನಾ ಮಹೋತ್ಸವ ಇಂದು ಬೆಳಗ್ಗೆ ಸಂಪನ್ನಗೊಂಡಿತು.
ಜ.28 ರಂದು ಬೆಳಗ್ಗೆ 7 ಗಂಟೆಗೆ ಮಂದಿರದ ಹಿರಿಯ ಸದಸ್ಯ ಗಣೇಶ್ ಪುತ್ರನ್ ( ಕಾಂಚನ್ ನಿವಾಸ್) ಬೋಳೂರು ಅವರು ದೀಪ ಬೆಳಗಿಸಿ ಏಕಾಹ ಭಜನೋತ್ಸವಕ್ಕೆ ಚಾಲನೆ ನೀಡಿದರು.
ಬಳಿಕ ನಾನಾ ಭಜನಾ ಮಂದಿರಗಳ ತಂಡಗಳಿಂದ ಭಜನೆ- ಸಂಕೀರ್ತನೆಯು ನಿರಂತರ ಜರುಗಿ, ಇಂದು ಬೆಳಗ್ಗೆ 7 ಗಂಟೆಗೆ ಮಂಗಳಾಚರಣೆ ನಡೆಯಿತು. ಮಂದಿರದ ಅರ್ಚಕ ಕಿರಣ್ ಕರ್ಕೇರ ಪೂಜಾ ವಿಧಿ- ವಿಧಾನ ನೆರವೇರಿಸಿದರು.
ಅಧ್ಯಕ್ಷ ಪ್ರವೀಣ್ ಅಮೀನ್, ಉಪಾಧ್ಯಕ್ಷ ಮಹೇಶ್ ಸುವರ್ಣ , ಕಾರ್ಯದರ್ಶಿ ಗಣೇಶ್ ಪುತ್ರನ್ ಸಹಿತ ಇತರ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.
ಭಕ್ತಿ ರಸಗಂಗೆಯ ನಡುವೆ ಭಕ್ತಜನರಿಗೆ ಸಾರ್ವಜನಿಕ ಅನ್ನದಾನ, ಫಲಾಹಾರದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಭಕ್ತರು ಆಗಮಿಸಿ ಶ್ರೀ ಮಹಾವಿಷ್ಣು ದೇವರ ದರ್ಶನ ಪಡೆದರು.
Kshetra Samachara
29/01/2021 04:32 pm