ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ ತಾಲೂಕು ಯುವ ಬಂಟರ ಸಂಘ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ

ಕುಂದಾಪುರ: ಕುಂದಾಪುರ ತಾಲೂಕು ಯುವ ಬಂಟರ ಸಂಘ ರಿ., ಕುಂದಾಪುರ ನೇತೃತ್ವದಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಣೆ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಡಾ|ಮಧುಕರ ಶೆಟ್ಟಿ ಐ.ಪಿ.ಎಸ್. ಸಂಸ್ಮರಣಾ ಪ್ರಶಸ್ತಿ-2020 ಹಾಗೂ ದಿ|ಎಂ.ಗೋಪಾಲಕೃಷ್ಣ ಶೆಟ್ಟಿ ಸಂಸ್ಮರಣಾ ಪ್ರಗತಿಪರ ಕೃಷಿಕರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಅವರು, ಶಿಕ್ಷಣದೊಂದಿಗೆ ಸಂಸ್ಕಾರ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಮಾನವತೆಯ ಕೆಲಸಗಳನ್ನು ಮಾಡುತ್ತಾ ಸಮಾಜವನ್ನು ಕಟ್ಟುವ ಕಾರ್ಯದಲ್ಲಿ ನಿರತರಾಗಬೇಕು. ಬದುಕಿನ ಗುರಿ ಸ್ಪಷ್ಟವಾಗಿದ್ದು, ಉದ್ಯೋಗಕ್ಕಾಗಿ ಪದವಿಯಾಗದೇ ಜೀವನ ಮೌಲ್ಯಗಳನ್ನು ಶಿಕ್ಷಣದೊಂದಿಗೆ ಪಡೆಯಬೇಕು. ಮಾನವತೆಯ ಕಾರ್ಯಗಳೊಂದಿಗಿನ ನಮ್ಮ ಬದುಕು ಸುಂದರ ಭಾವಗೀತೆಯಾಗಬೇಕು ಎಂದರು.

ಡಾ.ಮಧುಕರ ಶೆಟ್ಟಿ ಐ.ಪಿ.ಎಸ್. ಸಂಸ್ಮರಣಾ ಪ್ರಶಸ್ತಿ-2020ಯನ್ನು ಅಲಮಟ್ಟಿ ಕೃಷ್ಣಭಾಗ್ಯ ಜಲನಿಗಮದ ಪ್ರಧಾನ ಮುಖ್ಯ ಹಣಕಾಸು ಅಧಿಕಾರಿ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಇವರಿಗೆ ಮಂಗಳೂರು ಡಿ.ಸಿ.ಪಿ ಹರೇರಾಮ್ ಶಂಕರ್ ಪ್ರದಾನ ಮಾಡಿದರು. ಈ ಸಂದರ್ಭ ಮಾತನಾಡಿದ ಹರೀರಾಂ ಶಂಕರ್, ಡಾ.ಮಧುಕರ ಶೆಟ್ಟಿ ನಮಗೆ ದೊಡ್ಡ ಹೆಮ್ಮೆ. ದಕ್ಷ ಅಧಿಕಾರಿಯಾಗಿ ಹೆಸರು ಗಳಿಸಿದ ಅವರು ಮಾನವೀಯ ಹೃದಯುಳ್ಳವರು. ಅವರಂತಹ ಅಧಿಕಾರಿಗಳು ಹುಟ್ಟಿ ಬರಬೇಕು. ಆ ಮೂಲಕ ಸಮಾಜದ ಸುಧಾರಣೆ ಆಗಬೇಕು ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಜಿತ್ ಕುಮಾರ ಹೆಗ್ಡೆ ಅವರು, ಡಾ|ಮಧುಕರ ಶೆಟ್ಟಿ ಅವರ ತಂದೆ ವಡ್ಡರ್ಸೆ ರಘುರಾಮ ಶೆಟ್ಟಿ ಅವರು ಸ್ಥಾಪಿಸಿದ ಮುಂಗಾರು ಪತ್ರಿಕೆಯಲ್ಲಿ ಬ್ರಹ್ಮಾವರದಲ್ಲಿ ವರದಿಗಾರನಾಗಿ ಕೆಲಸ ಮಾಡಿದ ಹೆಮ್ಮೆ ನನಗಿದೆ. ಐಪಿಎಸ್, ಐಎಎಸ್ ಬ್ರಹ್ಮಾಂಡವಲ್ಲ. ವಿದ್ಯಾರ್ಥಿಗಳು ಆಡಳಿತಾತ್ಮಕವಾಗಿ ಉನ್ನತ ಹುದ್ದೆ ಅಲಂಕರಿಸಬೇಕು. ಐಪಿಎಸ್, ಐಎಎಸ್ ಮಾಡುವ ಬಗ್ಗೆ ಅಲೋಚನೆ ಮಾಡಬೇಕು ಎಂದರು.

Edited By : Manjunath H D
Kshetra Samachara

Kshetra Samachara

24/01/2021 11:45 am

Cinque Terre

9.57 K

Cinque Terre

1

ಸಂಬಂಧಿತ ಸುದ್ದಿ